ರಾತ್ರಿ ಮಲಗಿದ್ಮೇಲೆ ಕನಸು ಬೀಳೋದು ಸಾಮಾನ್ಯ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿಗೂ ಮಹತ್ವದ ಸ್ಥಾನವಿದೆ. ಯಾವ ಯಾವ ಕನಸು ಯಾವ ರೀತಿ ಅರ್ಥ ನೀಡುತ್ತದೆ ಎಂಬುದನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.
ಕನಸಿನಲ್ಲಿ ಮದುವೆ ಮೆರವಣಿಗೆ ಕಾಣಿಸಿದ್ರೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಇದು ಕೆಲವು ಅಹಿತಕರ ಘಟನೆಯ ಮುನ್ಸೂಚನೆಯಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕುಟುಂಬದ ಸದಸ್ಯರು ಶೀಘ್ರವೇ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಇಂಥ ಕನಸು ಬಿದ್ರೆ ಜಾಗರೂಕರಾಗಿರಿ. ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಿ.
ಬೇರೆಯವರ ಮದುವೆ ನಿಮ್ಮ ಕನಸಿನಲ್ಲಿ ಕಂಡ್ರೆ ಇದು ಕೂಡ ಅಶುಭ ಸಂಕೇತವಾಗಿದೆ. ನಿಮ್ಮ ಕೆಲಸದಲ್ಲಿ ನೀವು ವಿಫಲತೆ ಕಾಣುತ್ತೀರಿ ಎಂದರ್ಥ. ಜೀವನದಲ್ಲಿ ಅನೇಕ ಸಮಸ್ಯೆ ಕಾಡುವ ಸೂಚನೆಯಾಗಿರುತ್ತದೆ.
ಕನಸಿನಲ್ಲಿ ನಿಮ್ಮದೇ ಮದುವೆ ನಿಮಗೆ ಕಂಡ್ರೆ ಅದನ್ನು ಮಂಗಳವೆಂದು ಹೇಳಲಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸುಖ, ಸಂತೋಷ, ಶಾಂತಿ ಸಿಗುತ್ತದೆ ಎಂದರ್ಥ. ದಂಪತಿ ಮಧ್ಯೆ ಪ್ರೀತಿ ಹೆಚ್ಚಾಗುವ ಸೂಚನೆಯಾಗಿದೆ.
ಸ್ವಪ್ನ ಶಾಸ್ತ್ರದ ಪ್ರಕಾರ ನಿಮ್ಮ ಕನಸಿನಲ್ಲಿ ಮದುವೆಯ ಬಟ್ಟೆ ಹಾಕಿಕೊಂಡ ಮಹಿಳೆ ಕಾಣಿಸಿದ್ರೆ ಶುಭ ಸೂಚನೆಯಾಗಿದೆ. ಇದ್ರಿಂದ ಒಳ್ಳೆ ಸುದ್ದಿ ನಿಮಗೆ ಸಿಗಲಿದೆ. ಆರ್ಥಿಕ ಮುಗ್ಗಟ್ಟು ಬಗೆಹರಿಯಲಿದೆ.
ಸ್ವಪ್ನದಲ್ಲಿ ವಧು-ವರರ ಜೋಡಿ ಕಾಣಸಿದ್ರೆ ಅಶುಭ ಘಟನೆಯ ಸಂಕೇತವಾಗಿದೆ. ಕೆಲವು ಆರ್ಥಿಕ ಸಮಸ್ಯೆ ಬರಲಿವೆ ಎಂಬ ಸೂಚನೆಯಾಗಿದೆ.