
ಬೆಂಗಳೂರು: ಶಾಲಾ ಮಕ್ಕಳಿಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ ನವೆಂಬರ್ 1 ರಿಂದ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗಲಿದೆ.
ಅಕ್ಟೋಬರ್ 1 ರಿಂದ 31 ರವರೆಗೆ ಬಿಸಿಯೂಟ ನೀಡುವ ಬಗ್ಗೆ ಅಗತ್ಯ ತಯಾರಿ ಸಿದ್ಧತೆ ಮಾಡಿಕೊಳ್ಳುವಂತೆ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಸರಾ ರಜೆ ಮುಗಿದ ನಂತರ ಶಾಲೆಗೆ ಬರುವ ಮಕ್ಕಳಿಗೆ ನವೆಂಬರ್ 1 ರಿಂದ ಬಿಸಿಯೂಟ ಯೋಜನೆ ಆರಂಭಿಸಲಾಗುತ್ತದೆ.
ಇದಕ್ಕಾಗಿ ಶಾಲೆಗಳಲ್ಲಿ ಎಲ್ಪಿಜಿ ಸಿಲಿಂಡರ್, ಸ್ಟವ್ ಖರೀದಿ, ರಿಪೇರಿ, ಗ್ಯಾಸ್ ಪೈಪ್ ಬದಲಾವಣೆ, ಖರೀದಿ, ಅಕ್ಕಿ, ಗೋಧಿ, ತೊಗರಿಬೇಳೆ, ಆಹಾರಧಾನ್ಯ, ಎಣ್ಣೆ, ಉಪ್ಪು, ಸಾಂಬಾರ್ ಪುಡಿ, ಹಾಲಿನ ಪುಡಿ ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಲಾಗಿದೆ.