ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿ ತಮ್ಮ ಅಧಿಕೃತ ಲ್ಯಾಪ್ ಟಾಪ್ ಮತ್ತು ರಾಜತಾಂತ್ರಿಕ ಪಾಸ್ ಪೋರ್ಟ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ.
ಸೌತ್ ಎಕ್ಸ್ ಟೆನ್ಶನ್ ಕಡೆಗೆ ಅರಬಿಂದೋ ಮಾರ್ಗ್(ಐಎನ್‌ಎ ಮಾರ್ಕೆಟ್) ನಲ್ಲಿ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಗೆ ಸಹಾಯ ಮಾಡಲು ಅಧಿಕಾರಿ ಪ್ರಯತ್ನಿಸುತ್ತಿದ್ದಾಗ ಕಳ್ಳತನ ಘಟನೆ ಸಂಭವಿಸಿದೆ..
ಮಾರ್ಚ್ 27 ರಂದು ಸಂಜೆ 6.30 ರ ಸುಮಾರಿಗೆ ಅರಬಿಂದೋ ಮಾರ್ಗದಲ್ಲಿ(ಐಎನ್‌ಎ ಮಾರುಕಟ್ಟೆ) ಮಲಗಿದ್ದ ಪ್ರಜ್ಞಾಹೀನ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ ಎಂಇಎ ಉಪ ಕಾರ್ಯದರ್ಶಿ(ಕಾನೂನು ಅಧಿಕಾರಿ) ಅವರ ವಸ್ತುಗಳನ್ನು ಕಳವು ಮಾಡಲಾಗಿದೆ.
ಅಧಿಕಾರಿ ಪ್ರಜ್ಞಾಹೀನ ವ್ಯಕ್ತಿಯನ್ನು ಕರೆದೊಯ್ಯಲು ಪಿಸಿಆರ್ ವ್ಯಾನ್‌ಗೆ ಕರೆ ಮಾಡಿದ್ದರು. ಪಿಸಿಆರ್ ವ್ಯಾನ್‌ಗೆ ಕರೆ ಮಾಡಿದ ನಂತರ ಅವರು ತನ್ನ ಕಾರ್ ಬಳಿಗೆ ಹಿಂತಿರುಗಿದಾಗ, ಕಿಟಕಿಯ ಗಾಜುಗಳಲ್ಲಿ ಒಂದನ್ನು ಮುರಿದು ಅದರಲ್ಲಿದ್ದ ತನ್ನ ಸಾಮಾನುಗಳು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಂದು ಲ್ಯಾಪ್‌ಟಾಪ್, ಎರಡು ಮೊಬೈಲ್ ಫೋನ್‌ಗಳು ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್, ಅಧಿಕೃತ ಗುರುತಿನ ಚೀಟಿಗಳು, ಬ್ಯಾಂಕ್ ಕಾರ್ಡ್‌ಗಳು, 20 ಯುರೋಗಳು ಮತ್ತು 7,000 ರೂ ನಗದನ್ನು ಕಳವು ಮಾಡಲಾಗಿದೆ.
ರಾಷ್ಟ್ರ ರಾಜಧಾನಿಯ ಕೋಟ್ಲಾ ಮುಬಾರಕ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ.