ಅಂತಿಮವಾಗಿ ಆಟಿಕೆ ಕಂಪನಿಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಲು ಇಚ್ಛಿಸಿದ್ದಾರೆ. ಮುಂದಿನ ಹಂತದಲ್ಲಿ ವಿಶ್ವದ ನಂಬರ್ ಒನ್ ಆಟಿಕೆ ಕಂಪನಿಯನ್ನು ನಿರ್ಮಿಸುವುದು ನನ್ನ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅವರು ಐದು ಸಾಹಸೋದ್ಯಮ ಬಂಡವಾಳ ಕಂಪನಿಗಳನ್ನು ಸಂಪರ್ಕಿಸಿದ್ದಾರೆ. ಆದರೆ, ಅವರ ವ್ಯಾಪಾರ ಯೋಜನೆಗೆ ಹಣ ನೀಡಲು ಯಾರೂ ಒಪ್ಪಲಿಲ್ಲ. ತನ್ನ ಬಳಿ 1 ಟ್ರಿಲಿಯನ್ ಡಾಲರ್ ಹೊಂದಿದ್ದರೆ ಮತ್ತು ಯಾರಾದರೂ ತನ್ನ ಬಳಿ 0.01 ಶೇಕಡಾ ಕೇಳಿದ್ದರೆ, ಆ ವ್ಯಕ್ತಿಗೆ ಸುಲಭವಾಗಿ ಹಣ ನೀಡುತ್ತಿದ್ದೆ ಎಂಬುದಾಗಿ ಹೇಳಿದ್ದಾರೆ.
ಶರ್ಮಾ ಅವರು ತನ್ನ ಇನ್‌ಬಾಕ್ಸ್‌ನಿಂದ ಮತ್ತೊಂದು ಪತ್ರದ ಬಗ್ಗೆ ಪ್ರಸ್ತುತಪಡಿಸಿದ್ದಾರೆ. ಎರಡನೇ ಇಮೇಲ್ ನಲ್ಲಿ, ಹೈದರಾಬಾದ್‌ನ ವ್ಯಕ್ತಿ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ ವರದಿ ಕಾರ್ಡ್‌ಗಳಂತೆಯೇ ಸಣ್ಣ ವ್ಯಾಪಾರದ ಮಾಲೀಕರಿಗೆ ‘ಪ್ರಗತಿ ವರದಿ’ ಆಪ್ ಅನ್ನು ನಿರ್ಮಿಸುವ ತನ್ನ ಕನಸನ್ನು ವಿವರಿಸಿದ್ದಾನೆ.
ಇನ್ನು ಈ ಇಮೇಲ್ ನೆಟ್ಟಿಗರನ್ನು ರಂಜಿಸಿದೆ. ಹಲವಾರು ಮಂದಿ ತಮಾಷೆಯ ರೀತಿಯಲ್ಲಿ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.