![](https://kannadadunia.com/wp-content/uploads/2023/11/train-1.jpg)
ಮೈಸೂರು: ನೈಋತ್ಯ ರೈಲ್ವೆ ಎಲಿಯೂರು ರೈಲು ನಿಲ್ದಾಣದಲ್ಲಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಮದ್ದೂರು, ಮೈಸೂರು ರೈಲು ಬಹುತೇಕ ರದ್ದಾಗಲಿದೆ.
ಬೆಂಗಳೂರು-ಮೈಸೂರು ಮಧ್ಯೆ ಸಂಚರಿಸುವ ಮೆಮು ರೈಲುಗಳು ಮದ್ದೂರು ಮತ್ತು ಮೈಸೂರು ನಡುವೆ ರದ್ದಾಗಲಿವೆ. ಮಾರ್ಚ್ 3ರಂದು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಸಂಚರಿಸುವ ಈ ಎಲ್ಲಾ ರೈಲು ಸೇವೆಗಳು ತಾತ್ಕಾಲಿಕ ಸ್ಥಗಿತಗೊಳ್ಳಲಿವೆ.
ರೈಲು ಸಂಖ್ಯೆ 66551: ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು. ಇದು ಮದ್ದೂರಿನಲ್ಲಿ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 66552: ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು, ಇದು ಮೈಸೂರು ಬದಲು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಹೊರಡಲಿದೆ.
ರೈಲು ಸಂಖ್ಯೆ 06525: ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು, ಇದು ಮದ್ದೂರಿನಲ್ಲಿ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 06526: ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು, ಇದು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಮೈಸೂರಿನ ಬದಲು ಮದ್ದೂರಿನಿಂದ ಹೊರಡಲಿದೆ.
ರೈಲು ಸಂಖ್ಯೆ 66553: ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು, ಇದು ಮದ್ದೂರಿನಲ್ಲಿ ಕೊನೆಗೊಳ್ಳಲಿದೆ.
ರೈಲು ಸಂಖ್ಯೆ 66580: ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು, ಇದು ಮೈಸೂರಿನ ಬದಲು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಹೊರಡಲಿದೆ ಎಂದು ತಿಳಿದುಬಂದಿದೆ.