alex Certify ಸಾಸ್​ ಕಳಿಸಲು ಮರೆತ ರೆಸ್ಟೋರೆಂಟ್​ಗೆ ಗ್ರಾಹಕನಿಂದ ಬಾಂಬ್​ ಬೆದರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಸ್​ ಕಳಿಸಲು ಮರೆತ ರೆಸ್ಟೋರೆಂಟ್​ಗೆ ಗ್ರಾಹಕನಿಂದ ಬಾಂಬ್​ ಬೆದರಿಕೆ…!

ಚಿಕನ್​ ನಗೆಟ್ಸ್​ಗಳು ವಿಶ್ವದಲ್ಲಿ ಫೇಮಸ್​ ಆಗಿರುವ ಚಿಕನ್​ ಖಾದ್ಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಎಲ್ಲಾ ರೆಸ್ಟೋರೆಂಟ್​ ಹಾಗೂ ಫಾಸ್ಟ್​ ಫುಡ್ ಸೆಂಟರ್​ಗಳಲ್ಲಿ ಈ ಖಾದ್ಯ ಸಿಕ್ಕೇ ಸಿಗುತ್ತದೆ.

ಅದರಲ್ಲೂ ಮೆಕ್​ಡೊನಾಲ್ಡ್​​ನ ಚಿಕನ್​ ನಗೆಟ್ಸ್​ಗಳು ಅಂದರೆ ಮಾಂಸಪ್ರಿಯರ ಬಾಯಲ್ಲಿ ನೀರೂರೋದು ಸಹಜ. ಅದೇ ರೀತಿ ಅಮೆರಿಕದ ಲೋವಾದ ಗ್ರಾಹಕನೊಬ್ಬ ಚಿಕನ್​ ನಗೆಟ್ಸ್​ನ್ನು ಆರ್ಡರ್​ ಮಾಡಿದ್ದರು. ಆದರೆ ಮೆಕ್​ಡೊನಾಲ್ಡ್ ನವರು ಸಾಸ್​ ಕಳಿಸಲು ಮರೆತಿದ್ದರಿಂದ ಕೋಪಗೊಂಡಿದ್ದ.

ಬೇರೆ ಯಾವುದೇ ಗ್ರಾಹಕರಾಗಿದ್ದರೂ ಈ ಸಣ್ಣ ತಪ್ಪಿಗಾಗಿ ಹೆಚ್ಚಿನ ರಿಯಾಕ್ಟ್​ ಮಾಡುತ್ತಿರಲಿಲ್ಲವೇನೋ ಆದರೆ ಈತ ಮಾತ್ರ ರೆಸ್ಟೋರೆಂಟ್ ​​ಗೆ ಕರೆ ಮಾಡಿ ಬಾಂಬ್​ ಬೆದರಿಕೆ ಹಾಕಿದ್ದಾನೆ.

ಸಾಸ್​ನ್ನು ಕಳಿಸದ ಕಾರಣಕ್ಕೆ ರೆಸ್ಟೋರೆಂಟ್​ ಮೇಲೆ ಬಾಂಬ್​ ಹಾಕೋದಾಗಿ ಬೆದರಿಸಿದ್ದು ಮಾತ್ರವಲ್ಲದೇ ಸಾಸ್​ ಕಳಿಸಲು ಮರೆತ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತೇನೆ ಎಂದು ಹೇಳಿದ್ದಾನೆ. ಬಾಂಬ್ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಈ ಗ್ರಾಹಕನನ್ನ ಬಂಧಿಸಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...