ಐಷಾರಾಮಿ ಫ್ಯಾಶನ್ ಹೌಸ್ ಪರ್ಪಲ್ ಸ್ಟೈಲ್ ಲ್ಯಾಬ್ಸ್ ಸಂಸ್ಥಾಪಕ ಹಾಗೂ ಸಿಇಓ ಅಭಿಷೇಕ್ ಅಗರ್ವಾಲ್ ಬರೋಬ್ಬರಿ 5.1 ಕೋಟಿ ರೂಪಾಯಿ ಮೌಲ್ಯದ ಮೆಕ್ಲಾರೆನ್ಸ್ ಆರ್ಟುರಾ ಕಾರನ್ನು ಖರೀದಿ ಮಾಡಿದ್ದು ಭಾರತದಲ್ಲಿ ಈ ಕಾರನ್ನು ಹೊಂದಿರುವ ಮೊದಲ ವ್ಯಕ್ತಿ ಎನಿಸಿದ್ದಾರೆ. ಮೇ ತಿಂಗಳಲ್ಲಿ ಬಿಡುಗಡೆಯಾದ ಈ ಕಾರು 5.1 ಕೋಟಿ ರೂಪಾಯಿ ಎಕ್ಸ್ ಶೋರೂಂ ಬೆಲೆ ಹೊಂದಿದೆ.
ಭಾರತದಲ್ಲಿರುವ ಬ್ರಿಟೀಷ್ ಆಟೋ ಕ್ಷೇತ್ರದ ದೈತ್ಯ ಕಂಪನಿ ಮೆಕ್ಲಾರೆನ್ ಮುಂಬೈನಲ್ಲಿಯೂ ತನ್ನ ಶಾಖೆಯನ್ನು ಹೊಂದಿದ್ದು ಅಭಿಷೇಕ್ ಅಗರ್ವಾಲ್ರನ್ನು ನೆಕ್ಸ್ಟ್ ಜನರೇಷನ್ ಹೈಬ್ರಿಡ್ ಸೂಪರ್ ಕಾರ್ ಅರ್ಟುರಾವನ್ನು ಹೊಂದಿರುವ ಮೊದಲ ಭಾರತೀಯ ಎಂದು ಘೋಷಿಸಿದೆ.
ದೇಶದ ಮೊದಲ ಮೆಕ್ಲಾರೆನ್ ಆರ್ಟುರಾ ಹೈಬ್ರಿಡ್ ಸೂಪರ್ ಕಾರು, ಮುಂಬೈ ಮೂಲದ ಸಂಸ್ಥಾಪಕ ಹಾಗೂ ಸಿಇಓ ಅಭಿಷೇಕ್ ಮಾಂಟಿ ಅರ್ಗರ್ವಾಲ್ರ ಗ್ಯಾರೆಜ್ಗೆ ಇತ್ತೀಚಿಗೆ ಸೆರ್ಪಡೆಯಾಗಿದೆ ಎಂದು ಲಿಂಕ್ಡಿನ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಮಾದರಿಯು ಹೊಸ, 3.0-ಲೀಟರ್ V6 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ನಿಂದ ಚಾಲಿತವಾಗಿದ್ದು, 671 bhp (ಗರಿಷ್ಠ ಶಕ್ತಿ) ಮತ್ತು 720 Nm (ಗರಿಷ್ಠ ಟಾರ್ಕ್) ಸಂಯೋಜಿತ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ ಅದು ಹಿಂದಿನ ಚಕ್ರಕ್ಕೆ ಮಾತ್ರ ಶಕ್ತಿಯನ್ನು ಕಳುಹಿಸುತ್ತದೆ.