
ಜಗತ್ತಿನಾದ್ಯಂತ ತನ್ನ ರೆಸ್ಟೋರೆಂಟ್ ಗಳನ್ನು ಹೊಂದಿರುವ ಮ್ಯಾಕ್ ಡೊನಾಲ್ಡ್ಸ್ ಇದೀಗ ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಔಟ್ ಲೆಟ್ ಒಂದನ್ನು ತೆರೆದಿದೆ.
ಸಮುದ್ರ ಮಟ್ಟದಿಂದ 12,139 ಅಡಿ ಎತ್ತರದ ಜಾಗದಲ್ಲಿ ಕುಳಿತು ಬರ್ಗರ್ ಹಾಗೂ ಇತರ ತಿಂಡಿಗಳನ್ನು ಸವಿಯುವ ಮಜವನ್ನು ಮ್ಯಾಕ್ ಡೊನಾಲ್ಡ್ಸ್ ಈ ಮೂಲಕ ಟಿಬೆಟ್‌ನ ತನ್ನ ಗ್ರಾಹಕರಿಗೆ ಮಾಡಿಕೊಟ್ಟಿದೆ. ಮ್ಯಾಕ್ ಡೊನಾಲ್ಡ್ಸ್‌ನ ಟಿಪಿಕಲ್ ಮೆನುವನ್ನು ಇಲ್ಲೂ ಪೂರೈಸಲು 60 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಸೆರಗಿನಿಂದ ಪತ್ನಿ ಮುಖ ಮುಚ್ಚಿಕೊಂಡಿಲ್ಲವೆಂಬ ಕಾರಣಕ್ಕೆ ಮಗು ಹತ್ಯೆಗೈದ ಪತಿ
ಲ್ಹಾಸಾದ ಔಟ್‌ಲೆಟ್ ಮ್ಯಾಕ್ ಡೊನಾಲ್ಡ್ಸ್‌ನ ಅತ್ಯಂತ ಎತ್ತರ ಔಟ್‌ಲೆಟ್ ಎಂಬ ಖ್ಯಾತಿ ಪಡೆದಿದೆ. ಇದುವರೆಗೂ ಬ್ರಿಟನ್ ನ ಬೆನ್ ನೇವಿಸ್ ಎಂಬ ಊರಲ್ಲಿ ಸಮುದ್ರ ಮಟ್ಟದಿಂದ 4,379 ಅಡಿ ಎತ್ತರದಲ್ಲಿ ತೆರೆಯಲಾದ ರೆಸ್ಟೋರೆಂಟ್ ಈ ಹಿರಿಮೆಗೆ ಪಾತ್ರವಾಗಿತ್ತು.
ಸಮುದ್ರ ಮಟ್ಟದಿಂದ ಅಷ್ಟು ಎತ್ತರದಲ್ಲಿ ಕುಳಿತು ಸುತ್ತಲಿನ ವಿಹಂಗಮ ನೋಟ ಸವಿಯುತ್ತಾ ಬರ್ಗರ್ ತಿನ್ನುವುದು ಬಲು ಖುಷಿ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ ? 17ನೇ ಶತಮಾನದಲ್ಲಿ ದಲಾಯಿ ಲಾಮಾ ವಾಸಿಸುತ್ತಿದ್ದ ಅರಮನೆಯ ಎದುರೇ ಈ ರೆಸ್ಟೋರೆಂಟ್ ತಲೆ ಎತ್ತಿದೆ.