ಮೆಕ್ ಡೊನಾಲ್ಡ್ ಉದ್ಯೋಗಿಯೊಬ್ಬರು ಶಿಫ್ಟ್ ನಡುವೆಯೇ ಕೆಲಸ ತ್ಯಜಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯೂಜಿಲೆಂಡ್‌ನ ಮೆಕ್ ಡೊನಾಲ್ಡ್‌ನ ಮಳಿಗೆಯಲ್ಲಿ ಸಿಬ್ಬಂದಿ ಜಿಡ್ಡಿನ ಅಡುಗೆ ಸಲಕರಣೆಗಳನ್ನು ಸ್ವಚ್ಛಗೊಳಿಸಲು ಸೂಚಿಸಿದ ನಂತರ ಸಿಟ್ಟಿನಿಂದ ಕೆಲಸ ಬಿಟ್ಟು ಹೊರನಡೆಯುವ ಮೂಲಕ ತನ್ನ ಸಹೋದ್ಯೋಗಿಗಳಿಗೆ ಶಾಕ್ ನೀಡಿದರು.
26 ಸೆಕೆಂಡುಗಳ ವೀಡಿಯೊದಲ್ಲಿ, ವ್ಯಕ್ತಿ ಸಿಂಕ್‌ನಲ್ಲಿರುವ ತಿನಿಸುಗಳನ್ನು ನೋಡುತ್ತಾ, “ಹೆಲ್, ನೋ. ನಾನು ಅದನ್ನು ಸ್ವಚ್ಛಗೊಳಿಸುವುದಿಲ್ಲ, ನಾನು ಅದನ್ನು ಸ್ವಚ್ಛಗೊಳಿಸಲ್ಲ” ಎಂದು ಹೇಳುತ್ತಾನೆ. ನಂತರ ಅವನು ಕೆಲಸ ಬಿಟ್ಟು ಹೊರಡುತ್ತಿರುವುದನ್ನು ತನ್ನ ಮ್ಯಾನೇಜರ್‌ಗೆ ತಿಳಿಸುತ್ತಾನೆ.
ಅತನ ಮಾತಿನಿಂದ ಕೆರಳಿದ ಮ್ಯಾನೇಜರ್, ರೇಗಾಡುವುದನ್ನು ಕೇಳಬಹುದು, ಆದರೆ ಅತನ ತಂಡದ ಸದಸ್ಯರು ಕೆಲಸದಲ್ಲಿ ಉಳಿಯಲು ಕೇಳಿಕೊಳ್ಳುತ್ತಾರೆ. ಈ ವಿಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ ಹಂಚಿಕೊಂಡ 12 ಗಂಟೆಗಳಲ್ಲಿ 1.4 ಮಿಲಿಯನ್ ವೀಕ್ಷಣೆ ಕಂಡಿದೆ.
ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ವೈರಲ್ ಕ್ಲಿಪ್‌ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಉದ್ಯೋಗಿಯ ಬಗ್ಗೆ ಅನುಕಂಪ ತೋರಲಿಲ್ಲ ಮತ್ತು ಸಿಬ್ಬಂದಿ ಹೇಳಿದಷ್ಟು ಕೆಲಸ ಕಷ್ಟ ಎಂದು ಭಾವಿಸಲಿಲ್ಲ. “ಅದು ಕೆಟ್ಟದ್ದೇನಲ್ಲ ಇದು 20 ನಿಮಿಷಗಳ ಕೆಲಸ” ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಮಕ್ಕಳು ಕೆಲಸ ಮಾಡಲು ಬಯಸುವುದಿಲ್ಲ, ಸೋಮಾರಿ” ಎಂದು ಕುಟುಕಿದ್ದಾರೆ.
ಉದ್ಯೋಗಿಯೊಬ್ಬರು ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ತೊರೆದಿರುವುದು ಇದೇ ಮೊದಲಲ್ಲ. ಈ ಹಿಂದೆ, ಪ್ರತಿಕೂಲವಾದ ಕೆಲಸದ ಪರಿಸ್ಥಿತಿಗಳಿಂದಾಗಿ ತಮ್ಮ ಉದ್ಯೋಗವನ್ನು ತ್ಯಜಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಟಿಕ್‌ಟಾಕ್ ಬಳಕೆದಾರರಾದ ಜೊಯಿ, ಕ್ಯಾಲಿಫೋರ್ನಿಯಾದ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನ ಉದ್ಯೋಗಿಗಳು ರಾಜೀನಾಮೆ ನೀಡಿ ಸಾಮೂಹಿಕವಾಗಿ ಹೊರಡುವುದನ್ನು ತೋರಿಸುವ ಹತ್ತು ಸೆಕೆಂಡುಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದರು.
https://youtu.be/5Wsoa00dBGs