ನವದೆಹಲಿ: ಇಂಗ್ಲಿಷ್ ಹೊರತಾಗಿ ದೇಶದಲ್ಲಿ ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯ ಎಂಬಿಬಿಎಸ್ ಕೋರ್ಸ್ ಗಳಿಗೆ ಮಾನ್ಯತೆ ಇಲ್ಲವೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿಳಿಸಿದೆ.
ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸರ್ಕಾರಗಳು ಪ್ರಾದೇಶಿಕ ಭಾಷೆಗಳಲ್ಲಿ ಎಂಬಿಬಿಎಸ್ ಕೋರ್ಸ್ ಗಳನ್ನು ಬೋಧಿಸಲು ಇಚ್ಚಿಸಿದ ಬೆನ್ನಲ್ಲೇ ರಾಷ್ಟ್ರೀಯ ವೈದ್ಯಕೀಯ ಆಯೋಗ ದೇಶದಲ್ಲಿ ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಎಂಬಿಬಿಎಸ್ ಕೋರ್ಸ್ ಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿದೆ.
ಇದುವರೆಗೂ ಯಾವ ರಾಜ್ಯ ಸರ್ಕಾರವು ಪ್ರಾದೇಶಿಕ ಭಾಷೆಯಲ್ಲಿ ಎಂಬಿಬಿಎಸ್ ಬೋಧಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿಲ್ಲ. ಒಂದು ವೇಳೆ ಪ್ರಸ್ತಾವನೆ ಸಲ್ಲಿಕೆಯಾದರೂ ಜಾರಿ ಕಷ್ಟಸಾಧ್ಯ. ಇರುವ ನಿಯಮಗಳ ಪ್ರಕಾರ, ಎಂಬಿಬಿಎಸ್ ಕೋರ್ಸ್ ಬೇರೆ ಭಾಷೆಯಲ್ಲಿ ಬೋಧಿಸುವಂತಿಲ್ಲ. ರಾಜ್ಯ ಸರ್ಕಾರಗಳು ಪ್ರಾದೇಶಿಕ ಭಾಷೆಯಲ್ಲಿ ಎಂಬಿಬಿಎಸ್ ಕೋರ್ಸ್ ಬೋಧನೆ ಜಾರಿಗೆ ತಂದರೆ ಅದಕ್ಕೆ ಮಾನ್ಯತೆ ನೀಡುವುದಿಲ್ಲವೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಪದವಿ ವೈದ್ಯಕೀಯ ಶಿಕ್ಷಣ ಮಂಡಳಿ ಅಧ್ಯಕ್ಷಕ್ಷೆ ಅರುಣಾ ವಿ ವಾಣಿಕರ್ ಹೇಳಿದ್ದಾರೆ.