ನವದೆಹಲಿ: ಇನ್ಮುಂದೆ ವೈದ್ಯಕೀಯ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಯೋಗ ತರಬೇತಿ ಕಡ್ಡಾಯವಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.
ಈ ಮೂಲಕ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 10 ದಿನಗಳ ಯೋಗ ತರಬೇತಿ ಕಡ್ಡಾಯವಾಗಿದ್ದು, ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21ರಂದು ಆಚರಸಲಾಗುತ್ತಿದ್ದು, ಅಂದು ಮುಕ್ತಾಯವಾಗುವಂತೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ತರಬೇತಿ ನೀಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.
ಊಟದ ನಂತರ ಹೊಟ್ಟೆ ಉಬ್ಬರಿಸ್ತಾ ಇದೆಯಾ….? ಹಾಗಾದ್ರೆ ಇವುಗಳನ್ನು ತಿನ್ನಬೇಡಿ
ಅಲ್ಲದೇ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 2026 ರಲ್ಲಿ ಮೊದಲ ರಾಷ್ಟ್ರವ್ಯಾಪಿ ನಿರ್ಗಮನ ಪರೀಕ್ಷೆ ನಡೆಸುವುದಾಗಿ ಎನ್ ಎಂ ಸಿ ತಿಳಿಸಿದೆ. ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳು ಅವರ ಅಂಕಗಳ ಆಧಾರದ ಮೇಲೆ ಮಾಡಲು ಇಚ್ಛಿಸುವ ವೈದ್ಯಕೀಯ ಅಭ್ಯಾಸಗಳಿಗೆ ಪರವಾನಗಿ ಪಡೆಯುವ ಕ್ರಮ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಾಗಿದೆ.