ಮುಂಬೈ: ಕಟ್ಟಡದಿಂದ ಜಿಗಿದು ಎಂಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನ ಮಲಾಡ್ ನಲ್ಲಿ ನಡೆದಿದೆ.
22 ವರ್ಷದ ಧ್ರುವಿಲ್ ವೋರಾ ಮೃತ ವಿದ್ಯಾರ್ಥಿ. ಮೊದಲ ವರ್ಷದ ಎಂಬಿಎ ಓದುತ್ತಿದ್ದ ಧ್ರುವಿಲ್ ವೋರಾ, ಕಟ್ಟಡದ 7ನೇ ಮಹಡಿಯಿಮ್ದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶೈಕ್ಷಣಿಕ ಒತ್ತಡದಿಂದ ಮನೆಯ ವಸತಿ ಕಟ್ಟಡ ವಾಸುದೇವಂ ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಕೂಟರ್ ರಿಪೇರಿಗೆ ಕೊಡುವುದಾಗಿ ಹೇಳಿ ಮನೆಯಿಂದ ಹೊರಟ ಧ್ರುವಿಲ್, ಕಟ್ಟಡದ ಏಳನೇ ಮಹಡಿಗೆ ತೆರಳಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.