ಕಾಣಲು ಆಕರ್ಷಕವಾಗಿರುವ ಈ ಸಸ್ಯದ ಹೆಸರು ಮಯೂರಶಿಕೆ ಅಥವಾ ನವಿಲು ಜುಟ್ಟು. ಆಕ್ಟಿನಿ ಯೋಕ್ಟರಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಮಳೆಗಾಲದಲ್ಲಿ ಕಾಣಸಿಗುವ ಏಕವಾರ್ಷಿಕ ಸಸ್ಯವಾಗಿದೆ.
ಈ ಸಸ್ಯವನ್ನು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಮಯೂರಶಿಕೆಯನ್ನು ಪೂಜೆ, ಹೋಮ ಹವನಗಳಲ್ಲಿ ಬಳಸಲಾಗುತ್ತದೆ. ಜ್ವರ, ಮಲೇರಿಯಾ, ಕಾಮಾಲೆ, ಜಠರ ಹಾಗೂ ಕಿವಿಯ ಸಮಸ್ಯೆಯಲ್ಲಿ ಇಡೀ ಸಸ್ಯವನ್ನೇ ಬಳಸಲಾಗುತ್ತದೆ.
ಶ್ವಾಸಕೋಶದ ಸಮಸ್ಯೆಗಳಿಗೆ ನಾಟಿ ವೈದ್ಯರು ಮಯೂರಶಿಕೆಯನ್ನು ಬಳಸುತ್ತಾರೆ. ಕಿವಿ ಸೋರುವಿಕೆ ಅಥವಾ ಯಾವುದೇ ರೀತಿಯ ಕಿವಿಯ ತೊಂದರೆಯಲ್ಲಿ ಮಯೂರಶಿಕೆಯ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕಿವಿಗಳಿಗೆ ಎರಡು ಹನಿ ಹಾಕಿ. ರಕ್ತ ಸುರಿಯುತ್ತಿರುವ ಗಾಯಗಳ ಮೇಲೆ ಮಯೂರಶಿಕೆಯ ಚೂರ್ಣವನ್ನು ಹಾಕುವುದರಿಂದ ರಕ್ತ ಬೇಗನೆ ಹೆಪ್ಪುಗಟ್ಟಿ ರಕ್ತಸ್ರಾವ ನಿಲ್ಲುತ್ತದೆ.