ಹಾರರ್ ಕಥಾ ಹಂದರ ಹೊಂದಿರುವ ‘ಮಾಯಾಪುರ’ ಎಂಬ ಕಿರು ಚಿತ್ರ a2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. 14 ನಿಮಿಷ 48 ಸೆಕೆಂಡುಗಳ ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುವ ಈ ಕಿರುಚಿತ್ರ ಬೆಚ್ಚಿ ಬೀಳಿಸುವ ಮೂಲಕ ನೋಡುಗರ ಗಮನ ಸೆಳೆದಿದೆ.
ಪ್ರಜ್ಞ ಬ್ರಹ್ಮಾವರ್ ನಿರ್ದೇಶಿಸಿರುವ ಈ ಶಾರ್ಟ್ ಫಿಲಂನಲ್ಲಿ ಎಂ ಎಸ್ ಮಲ್ಲಿಕಾರ್ಜುನ್, ರೋಹಿತ್ ಸಿದ್ದು, ಶ್ರೀನಿವಾಸ್, ರೋಹಿತ್ ಹೆಗಡೆ, ರಾಧಿಕಾ ಅಭಿನಯಿಸಿದ್ದಾರೆ.
ಎಂ ಎಸ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದು, ಪ್ರಸಾದ್ ಉಪೇಂದ್ರ ಅವರ ಛಾಯಾಗ್ರಹಣ, ಭರತ್ ರಾಮ್ ಸಂಕಲನವಿದೆ. ಶೀಘ್ರದಲ್ಲೇ ಇದರ ಮುಂದುವರೆದ ಭಾಗ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.