ಅತಿ ಮುಖ್ಯ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಕೂಡ ಒಂದು. ಪಾನ್ ಕಾರ್ಡ್ ಇಲ್ಲದೆ ಅಗತ್ಯ ಕೆಲಸಗಳನ್ನು ಮಾಡೋದು ಕಷ್ಟ. ಬ್ಯಾಂಕ್ ಅಕೌಂಟ್ ಇದ್ದು, ದೊಡ್ಡ ಮಟ್ಟದಲ್ಲಿ ನೀವು ವ್ಯವಹಾರ ನಡೆದ್ತೀರೆಂದಾದ್ರೆ ಪಾನ್ ಕಾರ್ಡ್ ಅವಶ್ಯವಾಗಿ ಬೇಕು.
ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಪಾನ್ ಕಾರ್ಡ್ ಮಹತ್ವದ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ 5 ಲಕ್ಷಕ್ಕಿಂತ ಹೆಚ್ಚು ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಪಾನ್ ಕಾರ್ಡ್ ನಂಬರ್ ಬೇಕೇಬೇಕು.
ಕಾರ್ ಖರೀದಿ ಅಥವಾ ಮಾರಾಟಕ್ಕೂ ಪಾನ್ ಕಾರ್ಡ್ ಅತ್ಯವಶ್ಯಕ. 5 ಲಕ್ಷಕ್ಕಿಂತ ಹೆಚ್ಚು ಬೆಲೆಯ ಕಾರ್ ಖರೀದಿ ಹಾಗೂ ಬೈಕ್ ಖರೀದಿ ವೇಳೆ ಪಾನ್ ಕಾರ್ಡ್ ನಂಬರ್ ಅವಶ್ಯವಾಗುತ್ತದೆ.
ಬ್ಯಾಂಕ್ ಖಾತೆ ತೆಗೆಯಲು ನೀವು ಬಯಸಿದ್ದರೆ ಬ್ಯಾಂಕ್ ಸಿಬ್ಬಂದಿ ಪಾನ್ ಕಾರ್ಡ್ ಕೇಳ್ತಾರೆ. ಖಾತೆ ತೆರೆಯುವ ಮೊದಲು ಪಾನ್ ಕಾರ್ಡ್ ವಿವರವನ್ನು ನೀವು ನೀಡಬೇಕಾಗುತ್ತದೆ.
ದೇಶವಿರಲಿ, ವಿದೇಶವಿರಲಿ ಪ್ರಯಾಣ ಬೆಳೆಸುವಾಗ ಪಾನ್ ಕಾರ್ಡ್ ತೆಗೆದುಕೊಂಡು ಹೋಗಿ. ನಿಮ್ಮ ಖರ್ಚು 25 ಸಾವಿರಕ್ಕಿಂತ ಹೆಚ್ಚಾದಲ್ಲಿ ಹೊಟೇಲ್, ಪಾನ್ ಕಾರ್ಡ್ ಮಾಹಿತಿ ಕೇಳುತ್ತದೆ. ಮನೆ ಅಥವಾ ಕಚೇರಿಯಲ್ಲಿ ದೂರವಾಣಿ ಸಂಪರ್ಕಕ್ಕೆ ಪಾನ್ ಕಾರ್ಡ್ ಕಡ್ಡಾಯ.