ಹಿಂದೂ ಧರ್ಮದಲ್ಲಿ ಆನೆಯನ್ನು ತುಂಬಾ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಆನೆಯನ್ನು ಧನಲಕ್ಷ್ಮಿಯ ವಾಹನವೆಂದು ನಂಬಲಾಗಿದೆ. ಆನೆಯನ್ನು ಗಣೇಶನ ಪ್ರತೀಕವೆಂದು ಪೂಜೆ ಮಾಡಲಾಗುತ್ತದೆ. ಆನೆಗೆ ವಾಸ್ತು ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿ ಆನೆ ಮಂಗಳಕರ. ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿ ಹಾಗೂ ಆನೆ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ.
ಬೆಳ್ಳಿ ಆನೆಯನ್ನು ಮನೆ ಅಥವಾ ಕಚೇರಿಯಲ್ಲಿಡುವುದ್ರಿಂದ ಎಲ್ಲ ದೋಷ ನಿವಾರಣೆಯಾಗುತ್ತದೆ. ಮನೆ, ಕಚೇರಿಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗಿ ಲಕ್ಷ್ಮಿ ಅನುಗ್ರಹ ಪ್ರಾಪ್ತವಾಗುತ್ತದೆ.
ಬೆಳ್ಳಿ ಆನೆಯನ್ನು ಮನೆ ಅಥವಾ ಕಚೇರಿ ಟೇಬಲ್ ಮೇಲಿಟ್ಟರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ. ಬೆಳ್ಳಿ ಆನೆಯನ್ನು ಉತ್ತರ ದಿಕ್ಕಿನಲ್ಲಿಡುವುದು ಶುಭಕರ.
ಬೆಳ್ಳಿ ಆನೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿಡುವುದು ಒಳ್ಳೆಯದೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
ದಾಂಪತ್ಯದಲ್ಲಿ ವಿರಸ ಮೂಡಿದ್ದರೆ ಬೆಳ್ಳಿ ಆನೆಯನ್ನು ಮಲಗುವ ಕೋಣೆಯ ಉತ್ತರ ದಿಕ್ಕಿಗೆ ಇಡಬೇಕು.