ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಈ ಮಾಸದಲ್ಲಿ ದೈವಿ ತತ್ವ ಬಲ ಪಡೆಯುತ್ತದೆ. ಧನ ಹಾಗೂ ಧರ್ಮಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತವೆ. ಈ ತಿಂಗಳಲ್ಲಿ ದೇವಿ ರೂಪ ತುಳಸಿಯನ್ನು ಬೆಳೆಸಿ ಮದುವೆ ಮಾಡಲಾಗುತ್ತದೆ. ದೀಪ ದಾನ ಮಾಡುವುದ್ರಿಂದ ಸಾಕಷ್ಟು ಲಾಭವಿದೆ ಎಂದು ನಂಬಲಾಗಿದೆ.
ಕಾರ್ತಿಕ ಮಾಸದಲ್ಲಿ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಈ ತಿಂಗಳಿನಲ್ಲಿ ದ್ವಿದಳ ಧಾನ್ಯಗಳ ಸೇವನೆಯನ್ನು ನಿಷೇಧಿಸಲಾಗಿದೆ. ಸೂರ್ಯನ ಕಿರಣಗಳಡಿ ಕುಳಿತುಕೊಳ್ಳುವುದು ಶುಭ ಫಲ ನೀಡುತ್ತದೆ. ಕಾರ್ತಿಕ ಮಾಸದಲ್ಲಿ ಮಧ್ಯಾಹ್ನ ಮಲಗಬಾರದು.
ಕಾರ್ತಿಕ ಮಾಸ ಶ್ರೀಹರಿಗೆ ಪ್ರಿಯವಾದ ಮಾಸ. ತಾಯಿ ಲಕ್ಷ್ಮಿಗೂ ಅತ್ಯಂತ ಪ್ರಿಯವಾದ ತಿಂಗಳು. ಈ ತಿಂಗಳು ನಿದ್ರೆಯಿಂದ ಏಳುವ ವಿಷ್ಣು ಸಂತೋಷದ ಮಳೆ ಹರಿಸುತ್ತಾನೆ.
ಈ ಮಾಸದಲ್ಲಿ ಭೂಮಿಗೆ ಬರುವ ಲಕ್ಷ್ಮಿ ಭಕ್ತರಿಗೆ ಸಂಪತ್ತನ್ನು ದಾನ ಮಾಡ್ತಾಳೆ. ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ, ಪಾರ್ಥನೆ ಮಾಡುವುದ್ರಿಂದ ಸಂಪತ್ತು, ಸಂತೋಷ ಪ್ರಾಪ್ತಿಯಾಗುತ್ತದೆ.
ಕಾರ್ತಿಕ ಮಾಸದಲ್ಲಿ ಪ್ರತಿ ದಿನ ವಿಷ್ಣು-ಲಕ್ಷ್ಮಿ ಪೂಜೆಯನ್ನು ತಪ್ಪದೆ ಮಾಡಿ. ಗುಲಾಬಿ ಬಣ್ಣದ ಬಟ್ಟೆ ಧರಿಸಿ ವೃತ ಮಾಡಿ.
ಕೌಟುಂಬಿಕ ಸಂತೋಷಕ್ಕಾಗಿ ಕಾರ್ತಿಕ ಮಾಸದಲ್ಲಿ ತುಳಸಿ ಆರಾಧನೆ ಮಾಡಬೇಕು. ಕಾರ್ತಿಕ ಮಾಸದ ಯಾವುದೇ ದಿನ ತುಳಸಿ ಗಿಡವನ್ನು ಮನೆಗೆ ತನ್ನಿ. ತುಳಸಿ ಗಿಡವಿಟ್ಟ ಜಾಗದಲ್ಲಿ ಕೆಂಪು ಬಣ್ಣದಲ್ಲಿ ಸ್ವಸ್ಥಿಕವನ್ನು ಬಿಡಿಸಿ. ಪ್ರತಿ ದಿನ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ. ಭಾನುವಾರ ಮಾತ್ರ ದೀಪವನ್ನು ಹಚ್ಚಬೇಡಿ.