ಪ್ಯಾನ್ ಹಾಗೂ ಆಧಾರ್ ಕಾರ್ಡ್ಗಳನ್ನ ಲಿಂಕ್ ಮಾಡುವ ಮೊದಲು ತೆರಿಗೆ ಪಾವತಿದಾರರು ತೆರಿಗೆ ಇ ಫೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಲಾಗ್ ಇನ್ ಐಡಿ, ಪಾಸ್ವರ್ಡ್ ಹಾಗೂ ಹುಟ್ಟಿದ ದಿನಾಂಕವನ್ನ ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್ ಪೋರ್ಟಲ್ಗೆ ಲಾಗ್ ಇನ್ ಮಾಡಿ.
ಈ ಎಲ್ಲ ವಿವರಗಳನ್ನ ನೀಡಿದ ಬಳಿಕ ನಿಮಗೆ ಕೋಡ್ ಒಂದು ಸಿಗಲಿದೆ. ಈ ಸೈಟ್ಗೆ ಲಾಗಿನ್ ಆಗುವ ವೇಳೆ ನಿಮಗೆ ಪಾಪ್ಅಪ್ ವಿಂಡೋ ಕಾಣಿಸುತ್ತೆ. ನಿಮ್ಮ ಪಾನ್ ಕಾರ್ಡ್ನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಕೇಳುತ್ತದೆ. ಇಲ್ಲವಾದಲ್ಲಿ ನೀವು ಫ್ರೊಫೈಲ್ ಸೆಟ್ಟಿಂಗ್ಗೆ ಹೋಗಿ ಲಿಂಕ್ ಆಧಾರ್ ಬಟನ್ ಆಯ್ಕೆ ಮಾಡಬಹುದಾಗಿದೆ.
ಆಧಾರ್ ಕಾರ್ಡ್ನಲ್ಲಿ ನಮೂದಿಸಿರುವ ವಿವರಗಳೊಂದಿಗೆ ಪರದೆಯ ಮೇಲಿರುವ ವಿವರಗಳನ್ನ ಪರಿಶೀಲನೆ ಮಾಡಿ. ವಿವರಗಳು ಹೊಂದಿಕೆಯಾದ ಬಳಿಕ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಹಾಗೂ ಲಿಂಕ್ ಬಟನ್ ಕ್ಲಿಕ್ ಮಾಡಿ.
ಇದಲ್ಲದೆ ಇಂಟರ್ನೆಟ್ ಸಂಪರ್ಕವಿಲ್ಲದೆ ಮೊಬೈಲ್ ಎಸ್ಎಂಎಸ್ ಬಳಸಿಕೊಂಡು ಕೂಡ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಜೋಡಣೆ ಮಾಡಬಹುದಾಗಿದೆ. ಇದಕ್ಕಾಗಿ 12 ವಿಶಿಷ್ಟ ಸಂಖ್ಯೆಗಳನ್ನು 567678, 56161 ಗೆ ಎಸ್ಎಂಎಸ್ ಮಾಡಬಹುದಾಗಿದೆ. UIDPAN<space>12-digit Aadhaar><space>10-digit PAN ಹೀಗೆ ಸಂದೇಶ ಕಳುಹಿಸಿ ಲಿಂಕ್ ಮಾಡಬಹುದಾಗಿದೆ.
ನಿಮ್ಮ ಆಧಾರ್ ಕಾರ್ಡ್ನ್ನು ಪಾನ್ ಕಾರ್ಡ್ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂಬ ಸಂದೇಶವನ್ನ ನೀವು ಪಡೆಯುತ್ತೀರಿ.