ಬೆಂಗಳೂರು : ಮ್ಯಾಟ್ರಿಮೋನಿಯಲ್ಲಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ ನಾಕ್ ಖದೀಮ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪ್ರಕರಣ ಸಂಬಂಧ ದೀಪಕ್ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಮ್ಯಾಟ್ರಿಮೋನಿಯಲ್ಲಿ ವರನ ಹುಡುಕಾಟದಲ್ಲಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಜೊತೆ ಸ್ನೇಹ ಬೆಳೆಸಿ ಅದು ಇದು ಸುಳ್ಳು ಹೇಳಿ ಹಣ ವಸೂಲಿ ಮಾಡುತ್ತಿದ್ದನು.
ಅಂತೆಯೇ 41 ವರ್ಷದ ಮಹಿಳೆಯನ್ನು ವಂಚಿಸಿದ ಖದೀಮ ‘ ನಾನು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಸುಳ್ಳು ಹೇಳಿ 30 ಸಾವಿರ ರೂ ಹಣ ಪೀಕಿದ್ದಾನೆ. ಯಾವಾಗ ಮಹಿಳೆಗೆ ತಾನು ವಂಚನೆಗೊಳಗಾದೆ ಎಂದು ಗೊತ್ತಾಯ್ತೋ..ಆಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸದ್ಯ, ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.