ಬೆಂಗಳೂರು: ಬೆಂಗಳೂರಿನ ಮಾತೃ ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಮಹಿಳಾ ವೈದ್ಯೆಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸಿಡ್ ದಾಳಿ ನಡೆಸುವ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಸ್ಪತ್ರೆ ಕಟ್ಟಡ ಲೀಸ್ ವಿಚಾರ ಹಾಗೂ ಹಣಕಾಸಿನ ವ್ಯವಹಾರ ಸಂಬಂಧ ವೈದ್ಯೆ ಜಿಶಾ ಹಾಗೂ ರಶ್ಮಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಆಸ್ಪತ್ರೆ ಕಟ್ಟಡ ಮಾಲೀಕ ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ನಡುವೆ ಗಲಾಟೆ ನಡೆದು ದುಷ್ಕರ್ಮಿಗಳು ಆಸ್ಪತ್ರೆ ಮೇಲೆ ದಾಳಿ ನಡೆಸಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಮೈನೆ ಪ್ಯಾರ್ ಕಿಯಾ ಸುಂದರಿ ಭಾಗ್ಯಶ್ರೀ ʼಆರೋಗ್ಯ – ಸೌಂದರ್ಯʼ ಕ್ಕೆ ಕಾರಣವಂತೆ ಅಡುಗೆ ಮನೆಯ ಈ ಪದಾರ್ಥ….!
ಮಾತೃ ಆಸ್ಪತ್ರೆ ವೈದ್ಯೆ ಜಿಶಾ ಆಸ್ಪತ್ರೆ ಕಟ್ಟಡವನ್ನು 10 ವರ್ಷಕ್ಕೆ ಲೀಸ್ ಗೆ ಪಡೆದಿದ್ದು, ಅಗ್ರಿಮೆಂಟ್ ಮುಗಿಯಲು ಇನ್ನೂ ಏಳು ವರ್ಷ ಬಾಕಿಯಿರುವಾಗಲೇ ಕಟ್ಟಡ ಮಾಲೀಕ ಕಿಶೋರ್ ಈಗಲೇ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಅಗ್ರಿಮೆಂಟ್ ಅವಧಿ ಮುಗಿದ ಮೇಲೆ ಖಾಲಿ ಮಾಡುತ್ತೇವೆ ಎಂದು ವೈದ್ಯೆ ಹೇಳಿದ್ದಕ್ಕೆ ಜಗಳವಾಗಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಆಸ್ಪತ್ರೆ ಮೇಲೆ ದಾಳಿ ನಡೆದಿದ್ದು, ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.