ಬೆಂಗಳೂರು: ಬಳ್ಳಾರಿ ಬಿಮ್ಸ್ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸರಣಿ ಸಾವಿನ ಬಗ್ಗೆ ವರದಿಯಾಗುತ್ತಿದ್ದು, ರಾಯಚೂರಿನಲ್ಲಿ 11 ಬಾಣಂತಿಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ಈ ಸಾವುಗಳಿಗೆ ಕೊನೆಯೆಂದು ಎಂದು ಪ್ರಶ್ನಿಸಿದೆ.
ಬಳ್ಳಾರಿಯ ಬಿಮ್ಸ್‌ನಲ್ಲಿ ಆರಂಭವಾಗಿದ್ದ ಬಾಣಂತಿಯರ ಮರಣ ಮೃದಂಗ ಈಗ ರಾಯಚೂರಿನ ರಿಮ್ಸ್‌ನಲ್ಲಿಯೂ ಮುಂದುವರೆದಿದೆ. ಬಾಣಂತಿ ಜೊತೆ ನವಜಾತ ಶಿಶುಗಳು ಅಸು ನೀಗುತ್ತಿರುವುದು ಅತ್ಯಂತ ದುಖಃದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಇನ್ನೆಷ್ಟು ಬಾಣಂತಿ ಹಾಗೂ ಶಿಶುಗಳ ಸಾವನ್ನು ನಿಮ್ಮ ಭ್ರಷ್ಟ ಸರ್ಕಾರ ಬಯಸುತ್ತಿದೆ..? ಬಾಣಂತಿಯರ ಸರಣಿ ಸಾವಿಗೆ ಕೊನೆಯೆಂದು..? ಕೂಡಲೇ ಬಾಣಂತಿಯರ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ಕುರ್ಚಿ ಬಿಟ್ಟು ತೊಲಗಿ ಎಂದು ಬಿಜೆಪಿ ಆಗ್ರಹಿಸಿದೆ.