ಇಸ್ಲಾಮಾಬಾದ್: 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮೀರ್ ಗೆ ಪಾಕಿಸ್ತಾನದಲ್ಲಿ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಭಯೋತ್ಪಾದನೆ-ಹಣಕಾಸು ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಈ ತಿಂಗಳ ಆರಂಭದಲ್ಲಿ ಲಾಹೋರ್ ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ನಿಷೇಧಿತ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಕಾರ್ಯಕರ್ತ ಸಾಜಿದ್ ಮಜೀದ್ ಮೀರ್ ಗೆ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಪ್ರಕರಣದಲ್ಲಿ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಭಯೋತ್ಪಾದನೆಗೆ ಸಂಬಂಧಿಸಿದ ಹಿರಿಯ ವಕೀಲರು ತಿಳಿಸಿದ್ದಾರೆ.
ಅಪರಾಧಿ ಮೀರ್ ಈ ಏಪ್ರಿಲ್ ನಲ್ಲಿ ಬಂಧಿಸಿದಾಗಿನಿಂದ ಕೋಟ್ ಲಖ್ಪತ್ ಜೈಲಿನಲ್ಲಿದ್ದಾನೆ.. ನ್ಯಾಯಾಲಯವು ಅಪರಾಧಿಗೆ 4,00,000 ರೂ.ಗಿಂತ ಹೆಚ್ಚು ದಂಡವನ್ನು ವಿಧಿಸಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಮೀರ್ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿತ್ತು. 166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯಲ್ಲಿನ ಆತನ ಕೃತ್ಯಕ್ಕಾಗಿ 5 ಮಿಲಿಯನ್ ಡಾಲರ್ ಬಹುಮಾನ ಹೊಂದಿರುವ ಸಾಜಿದ್ ಮಿರ್ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಮೀರ್ ನನ್ನು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಂದು ಕರೆಯಲಾಗಿದೆ. 2005 ರಲ್ಲಿ ನಕಲಿ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ಭಾರತಕ್ಕೆ ಭೇಟಿ ನೀಡಿದ್ದ.