ನವದೆಹಲಿ: ಒಂದು ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಲು ಪೇಮೆಂಟ್ ಪ್ರೊಸೆಸಿಂಗ್ ಕಂಪನಿ ಮಾಸ್ಟರ್ ಕಾರ್ಡ್ ಮುಂದಾಗಿದೆ.
ಜಾಗತಿಕ ಮಟ್ಟದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ. 3ರಷ್ಟು ಕಡಿತಗೊಳಿಸಲು ಮಾಸ್ಟರ್ ಕಾರ್ಡ್ ಉದ್ದೇಶಿಸಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯನ್ನು ಮರುಸಂಘಟಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲಾಗುವುದು.
ನ್ಯೂಯಾರ್ಕ್ ಮೂಲದ ಈ ಕಂಪನಿಯಲ್ಲಿ ಕಳೆದ ವರ್ಷ ಅಂತ್ಯದವರೆಗೆ 33,400 ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಸುಮಾರು ಒಂದು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಪಾವತಿಗಳ ನೆಟ್‌ವರ್ಕ್‌ನ ವಕ್ತಾರರ ಪ್ರಕಾರ, ಮಾಸ್ಟರ್‌ಕಾರ್ಡ್ Inc. ವಿಶ್ವಾದ್ಯಂತ 3 ಶೇಕಡಾ ಸಿಬ್ಬಂದಿಯನ್ನು ಕಡಿತಗೊಳಿಸುತ್ತಿದೆ. ಹೆಚ್ಚಿನ ಉದ್ಯೋಗ ಕಡಿತ ಅಧಿಸೂಚನೆಗಳು ಸೆಪ್ಟೆಂಬರ್ 30 ರ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿದೆ.