ರಾಜ್ಯಾದ್ಯಂತ ಮುಂದಿನ 5 ದಿನ ಗರಿಷ್ಟ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಸುಡು ಬಿಸಿಲು ಜನಸಾಮಾನ್ಯರನ್ನು ಕಂಗೆಡಿಸಿದೆ. 10 ಗಂಟೆಯ ಬಳಿಕ ಹೊರಗೆ ಹೋಗಲೂ ಸಹ ಹಿಂದೇಟು ಹಾಕುವಂತಾಗಿದ್ದು, ತಾಪಮಾನದಿಂದ ಜನರು ಹೈರಾಣಾಗಿದ್ದಾರೆ. ಫೆಬ್ರವರಿಯಲ್ಲೇ ಕೆಲವು ಜಿಲ್ಲೆಗಳಲ್ಲಿ 30-35 ಡಿಗ್ರೀ ಸೆ.ತಾಪಮಾನ ದಾಖಲಾಗುತ್ತಿದೆ.
ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಲು ಹಾಗೂ ಸೆಕೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 5 ದಿನ ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರೀ ಸೆ.ಹೆಚ್ಚಳವಾಗಲಿದೆ. ಉತ್ತರ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2 ರಿಂದ 4 ಡಿಗ್ರೀ ಸೆ,ಉಷ್ವಾಂಶ ಹೆಚ್ಚಳವಾಗಲಿದೆ.