ಮನೆಯೊಂದರ ಮೇಲ್ಛಾವಣಿಗೆ ಬಡಿದ ಸಿಡಿಲು: ಮೊಬೈಲ್ ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ..! 07-07-2022 8:43AM IST / No Comments / Posted In: Featured News, Live News, International ಬೃಹತ್ ಮಿಂಚೊಂದು ಕಾಣಿಸಿಕೊಂಡು ಮನೆಯ ಮೇಲ್ಛಾವಣಿಗೆ ಸಿಡಿಲು ಹೊಡೆದಿರುವ ಘಟನೆ ಆಸ್ಪೈನ್-ಚಿಲ್ಲಿಂಗ್ ಕ್ಲಿಪ್ ಮ್ಯಾಸಚೂಸೆಟ್ಸ್‌ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಛಾವಣಿಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯ ಮೇಲ್ಮಹಡಿ ಇದರಿಂದ ಹಾನಿಗೊಳಗಾದ ಘಟನೆ ನಡೆದಿದೆ. ಹಾನಿಗೊಳಗಾದ ಮನೆಯಿಂದ ನೂರಾರು ಅಡಿ ದೂರದಲ್ಲಿ ವಾಸಿಸುತ್ತಿದ್ದ 14 ವರ್ಷದ ಜೋಶುವಾ ಪಬಿಸ್ಜ್ ಎಂಬಾತ ಈ ವಿಡಿಯೋವನ್ನು ಸೆರೆಹಿಡಿದಿದ್ದಾನೆ. ಪತ್ರಕರ್ತರೊಬ್ಬರು ಮನೆಗೆ ಸಿಡಿಲು ಬಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಬೃಹತ್ ಸಿಡಿಲು ಛಾವಣಿಗೆ ಬಡಿಯುತ್ತಿರುವುದು ಮತ್ತು ಛಾವಣಿಯ ಹತ್ತಿರ ನಿಂತಿರುವ ಮರವನ್ನು ಸುಡುತ್ತಿರುವುದನ್ನು ನೋಡಬಹುದು. ಬಾಲಕ ತನ್ನ ಫೋನ್‌ನಲ್ಲಿ ಘಟನೆಯನ್ನು ನಿಧಾನಗತಿಯಲ್ಲಿ ಗುಡುಗು ಸಹಿತ ಮಳೆಯ ದೃಶ್ಯವನ್ನು ಸೆರೆಹಿಡಿದಿದ್ದಾನೆ. ಜೋಶುವಾ ತಂದೆ ಡೇವಿಡ್, ಮಿಂಚಿನ ನಂತರ ಹೊರಹೊಮ್ಮಿದ ಶಬ್ಧವು ಬಹಳ ಭೀಕರವಾಗಿತ್ತು ಎಂದು ತಿಳಿಸಿದ್ದಾರೆ. ಇನ್ನು ಸಿಡಿಲಿನ ಶಬ್ಧಕ್ಕೆ ಮನೆಯಲ್ಲಿದ್ದವರು ಭೀತಿಗೊಂಡಿದ್ದಾರೆ. ಮನೆಯ ಮೇಲ್ಛಾವಣಿ ಸುಡುತ್ತಿರುವುದನ್ನು ಕಂಡ ಅವರು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಹಾನಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಹ ಇದೇ ರೀತಿಯ ವಿಡಿಯೋ ವೈರಲ್ ಆಗಿದೆ. ಅಲ್ಲಿ ವ್ಯಕ್ತಿಯೊಬ್ಬರು ನೆಲದ ಮೇಲೆ ಭಯಾನಕ ಸಿಡಿಲಿನ ಹೊಡೆತವನ್ನು ಸೆರೆಹಿಡಿದಿದ್ದಾರೆ. ಮಿಂಚು ವಿದ್ಯುತ್ ಸರಬರಾಜು ಲೈನ್‌ಗೆ ತಗುಲಿ, ಕೆಲವೇ ಕ್ಷಣಗಳಲ್ಲಿ ದಟ್ಟವಾದ ಹೊಗೆ ಆವರಿಸಿತು. ಈ ವೇಳೆ ಭೀಕರ ಶಬ್ಧ ಹೊರಹೊಮ್ಮಿದೆ. Family escapes after Danvers home hit by lightning; bolt caught on camera by neighbor’s cell phones. (📷: Maggie Pabisz) https://t.co/Q8OqnjsaeV https://t.co/im41SJMPUr pic.twitter.com/YVA4NwsaSC — Michael Rosenfield NBC10 Boston (@MikeRNBCBoston) June 30, 2022