alex Certify ವೆಚ್ಚ ಕಡಿತ ಮಾಡಲು 180 ಉದ್ಯೋಗಿಗಳನ್ನು ವಜಾ ಮಾಡಿದ ʼಉಡಾನ್​ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಚ್ಚ ಕಡಿತ ಮಾಡಲು 180 ಉದ್ಯೋಗಿಗಳನ್ನು ವಜಾ ಮಾಡಿದ ʼಉಡಾನ್​ʼ

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ “ಬಿ ಟು ಬಿ’ ಟ್ರೇಡ್​ ಫ್ಲಾಟ್​ ಫಾರ್ಮ್ ಆದಂತಹ ಉಡಾನ್​ 180ರಿಂದ 200 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ.

ಕಂಪನಿಯಲ್ಲಿ ಸುಮಾರು 4000 ಜನರು ಕೆಲಸ ಮಾಡುತ್ತಿದ್ದು, ಅದರ ಒಟ್ಟು ಉದ್ಯೋಗಿಗಳ ಶೇಕಡಾ 4-5 ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದೆ.

ದಕ್ಷತೆಯನ್ನು ಹೆಚ್ಚಿಸಿ, ನಮ್ಮ ವೆಚ್ಚದ ರಚನೆ ಸುಧಾರಿಸಿ ಮತ್ತು ಬೆಳವಣಿಗೆ ವೇಗಗೊಳಿಸಲು ಕ್ರಮಕೈಗೊಳ್ಳುತ್ತಿದ್ದೇವೆ. ಹೆಚ್ಚು ಪರಿಣಾಮಕಾರಿ, ಗ್ರಾಹಕ- ಕೇಂದ್ರಿತವಾಗಿಸುವತ್ತ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ

ಕಂಪನಿಯು 18ರಿಂದ 24 ತಿಂಗಳೊಳಗೆ ಐಪಿಒ ಪ್ರಾರಂಭಿಸುವ ಮಹತ್ವಾಕಾಂಕ್ಷೆ ಘೋಷಿಸುವ ಸಂದರ್ಭದಲ್ಲಿಯೆ ಸಿಬ್ಬಂದಿ ಕಡಿತ ಮಾಡಲಾಗಿದೆ.

ಫ್ಲಿಪ್​ಕಾರ್ಟ್​ ಮಾಜಿ ಉದ್ಯೋಗಿಗಳಾದ ಅಮೋದ್​ ಮಾಳವಿಯಾ, ಸುಜೀತ್​ ಕುಮಾರ್​ ಮತ್ತು ವೈಭವ್​ ಗುಪ್ತಾ ಅವರು 2016ರಲ್ಲಿ ಉಡಾನ್​ ಪ್ರಾರಂಭಿಸಿದರು. ಇದು ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ತಯಾರಕರು ಮತ್ತು ವ್ಯಾಪಾರಿಗಳನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುತ್ತದೆ. ಅವರಿಗೆ ವಿವಿಧ ಗ್ರಾಹಕರು, ಪೂರೈಕೆದಾರರು ಮತ್ತು ಉತ್ಪನ್ನಗಳಿಗೆ ಸಂಪರ್ಕ ನೀಡುತ್ತದೆ. ಪರಸ್ಪರ ನೇರವಾಗಿ ಸಂವಹನ ನಡೆಸಲು ಸಹ ಸಹಕರಿಸುತ್ತದೆ.

ವೆಚ್ಚ ಕಡಿತ ಮಾಡಲು ಸ್ಟಾರ್ಟಪ್​ಗಳು ಸಿಬ್ಬಂದಿ ವಜಾಗೊಳಿಸಿರುವುದು ಇದೇ ಮೊದಲ ಬಾರಿ ಅಲ್ಲ. ಹಣವನ್ನು ಉಳಿಸುವ ಪ್ರಯತ್ನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಿವಿಧ ಕೈಗಾರಿಕೆಗಳ ಸಿಬ್ಬಂದಿಯನ್ನು ವಜಾಗೊಳಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...