ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಮೇಘ ಸ್ಪೋಟದಿಂದ ಭಾರೀ ಹಿಮ ಕುಸಿತವಾಗಿದ್ದು, ಹಿಮ ಕುಸಿತದಿಂದಾಗಿ ಉಂಟಾದ ಪ್ರವಾಹದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿವೆ.
ದೌಲಿ ಗಂಗಾನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ತಪೋವನ ಪ್ರದೇಶದಲ್ಲಿ ದೌಲಿ ಗಂಗಾ ನದಿ ಉಕ್ಕಿ ಹರಿದಿದ್ದು ಋಷಿಗಂಗಾ ಯೋಜನೆಯ ಪವರ್ ಪ್ರಾಜೆಕ್ಟ್ ಗೂ ಭಾರಿ ಹಾನಿಯಾಗಿದೆ. ಈ ವೇಳೆ ಹಲವರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಅನೇಕ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡುಗರ ಎದೆ ಝಲ್ಲೆನಿಸುವಂತಿದೆ. ನದಿ ತಿರದ ಅನೇಕ ಮನೆಗಳು ಕೊಚ್ಚಿ ಹೋಗಿದ್ದು, ಐಟಿಬಿಪಿ ಯೋಧರು ರಕ್ಷಣೆಗೆ ಧಾವಿಸಿದ್ದಾರೆ.