alex Certify ಪ್ರತಿಷ್ಟಿತ ಸಿಕಂದರಾಬಾದ್ ಕ್ಲಬ್ ನಲ್ಲಿ ಅಗ್ನಿ ಅವಘಡ, 20 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ಸುಟ್ಟು ಭಸ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಟಿತ ಸಿಕಂದರಾಬಾದ್ ಕ್ಲಬ್ ನಲ್ಲಿ ಅಗ್ನಿ ಅವಘಡ, 20 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ಸುಟ್ಟು ಭಸ್ಮ

ತೆಲಂಗಾಣದ ಸಿಕಂದರಾಬಾದ್ ಕ್ಲಬ್‌ನಲ್ಲಿ ಭಾನುವಾರ ಬೆಳಗಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಅವಘಡದಲ್ಲಿ 20 ಕೋಟಿ ರೂ. ಗಳಿಗೂ ಅಧಿಕ ಆಸ್ತಿ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ‌.

ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ಹಲವು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೂ ಸಾಕಷ್ಟು ಆಸ್ತಿ ನಷ್ಟವಾಗಿದ್ದು, ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೈದರಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ‘ಹೆರಿಟೇಜ್’ ಸ್ಥಾನಮಾನ ಪಡೆದುಕೊಂಡಿರುವ ಸಿಕಂದರಾಬಾದ್ ಕ್ಲಬ್, ಸಿಕಂದರಾಬಾದ್‌ ನ ಹೃದಯಭಾಗದಲ್ಲಿ 22 ಎಕರೆ ಪ್ರದೇಶದಲ್ಲಿ ಹರಡಿದೆ. 1878 ರಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಈ ಕ್ಲಬ್ ಭಾರತದ ಅತ್ಯಂತ ಹಳೆಯ ಕ್ಲಬ್‌ ಗಳಲ್ಲಿ ಒಂದಾಗಿದೆ.

ಸಿಕಂದರಾಬಾದ್ ಕ್ಲಬ್ ಎಂದು ಹೆಸರಿಸುವ ಮೊದಲು, ಇದನ್ನು ಸಿಕಂದರಾಬಾದ್ ಗ್ಯಾರಿಸನ್ ಕ್ಲಬ್, ಸಿಕಂದರಾಬಾದ್ ಜಿಮ್ಖಾನಾ ಕ್ಲಬ್ ಮತ್ತು ಯುನೈಟೆಡ್ ಸರ್ವಿಸಸ್ ಕ್ಲಬ್ ಎಂದು ಕರೆಯಲಾಗುತ್ತಿತ್ತು. 1947 ರವರೆಗೆ, ಕ್ಲಬ್‌ ಗೆ ಅಧ್ಯಕ್ಷರಾಗಿ ಬ್ರಿಟಿಷರನ್ನ ಮಾತ್ರ ನೇಮಕ ಮಾಡಲಾಗುತ್ತಿತ್ತು. ಜೊತೆಗೆ ಕೆಲವು ಉನ್ನತ ಶ್ರೇಣಿಯ ಗಣ್ಯರಿಗೆ ಮಾತ್ರ ಸದಸ್ಯತ್ವ ನೀಡಲಾಗಿತ್ತು.

ಆದರೆ ಸ್ವಾತಂತ್ರ್ಯ ನಂತರ, ಸೆಪ್ಟೆಂಬರ್ 1948 ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಹೈದರಾಬಾದ್ ಅನ್ನು ಆಕ್ರಮಿಸಿದಾಗ, ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್ ಜನರಲ್ ಚೌಧರಿ ಕೆಲವು ತಿಂಗಳುಗಳ ಕಾಲ ಸಿಕಂದರಾಬಾದ್ ಕ್ಲಬ್ ನ ಅಧ್ಯಕ್ಷರಾಗಿದ್ದರು.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...