ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ಪ್ರದೇಶದಲ್ಲಿರುವ ಪಾಕಿಸ್ತಾನದ ಪರಮಾಣು ಆಯೋಗದ ಕಚೇರಿಯ ಬಳಿ ಭಾರಿ ಸ್ಫೋಟ ಸಂಭವಿಸಿದೆ.
ಬಲೂಚಿಸ್ತಾನ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಗಳಲ್ಲಿ 30-50 ಕಿಲೋಮೀಟರ್ ದೂರದಿಂದ ಸ್ಫೋಟದ ಶಬ್ದ ಕೇಳಿದೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿನ ವೀಡಿಯೊ ವೈರಲ್ ಆಗಿದ್ದು, ಸೇನೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಫೋಟದ ಸ್ಥಳಕ್ಕೆ ಧಾವಿಸುತ್ತಿರುವುದನ್ನು ನೋಡಬಹುದಾಗಿದೆ. . ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಾವುನೋವುಗಳು ಅಥವಾ ಗಾಯಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ.ಈ ತಿಂಗಳ ಆರಂಭದಲ್ಲಿ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಗಳಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 65 ಜನರು ಸಾವನ್ನಪ್ಪಿದ ನಂತರ ಈ ಘಟನೆ ನಡೆದಿದೆ.