ನವದೆಹಲಿ: ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ಗೆ ಹ್ಯಾಕರ್ ಗಳು ಕನ್ನ ಹಾಕಿದ್ದು, ಕೋಟ್ಯಂತರ ಗ್ರಾಹಕರ ಸೂಕ್ಷ್ಮ ಮಾಹಿತಿ ಕಳವು ಮಾಡಿದ್ದಾರೆ.
ಕಿಬರ್ ಫ್ಯಾಂಟಮ್ ಹೆಸರಿನ ಹ್ಯಾಕರ್ ಗಳು ಕೃತ್ಯವೆಸಗಿದ್ದು, 4 ಲಕ್ಷ ರೂ.ಗೆ ಮಾಹಿತಿ ಮಾರಾಟವಾಗಿದೆ ಎಂದು ವರದಿಯಾಗಿದೆ. ಹ್ಯಾಕರ್ ಗಳು ಕಳವು ಮಾಡಿರುವ ಮಾಹಿತಿಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಏಥಿಯನ್ಸ್ ಟೆಕ್ ಎಂಬ ಸಂಸ್ಥೆ ತಯಾರಿಸಿದ ಅಪಾಯ ಮುನ್ಸೂಚನಾ ವರದಿಯಲ್ಲಿ ಕಿಬರ್ ಫ್ಯಾಂಟಮ್ ಹೆಸರಿನ ಹ್ಯಾಕರ್ ಈ ಕೆಲಸ ಮಾಡಿದ್ದಾನೆ ಎಂದು ಹೇಳಿದೆ.
ಹ್ಯಾಕ್ ಮಾಡಿದ ನಂತರ ಸಿಮ್ ಕ್ಲೋನಿಂಗ್, ಐಎಂಎಸ್ಐ ಸಂಖ್ಯೆ, ಮೊಬೈಲ್ ಲೊಕೇಶನ್, ಡಿಪಿ ಕಾರ್ಡ್ ಡೇಟಾ ಬ್ಯಾಂಕ್ ಮಾಹಿತಿ ಸೇರಿದಂತೆ ಒಟ್ಟು 278 ಬಿಬಿ ದತ್ತಾಂಶವನ್ನು ಕದ್ದು ಮಾರಾಟ ಮಾಡಲಾಗಿದೆ. ಕೋಟ್ಯಂತರ ಜನರ ಸೂಕ್ಷ್ಮ ಮಾಹಿತಿಯನ್ನು ಕದ್ದಿರುವ ಕಿಬರ್ ಫ್ಯಾಂಟಮ್ ಮೇ 30 – 31ರವರೆಗೆ ವಿಶೇಷ ಆಫರ್ ಅಡಿಯಲ್ಲಿ 4,17,000 ರೂ ಗೆ ಮಾರಾಟ ಮಾಡಿದ್ದಾಗಿ ಹೇಳಲಾಗಿದೆ.