![](https://kannadadunia.com/wp-content/uploads/2023/04/4q49td68_sikkim-nathu-la-avalanche_625x300_04_April_23-1024x630.jpg)
ಸಿಕ್ಕಿಂನ ನಾಥು ಲಾ ಪರ್ವತದಲ್ಲಿ ಭಾರೀ ಹಿಮ ಕುಸಿತವಾಗಿದ್ದು ಆರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಸಿಲುಕಿರುವ ಶಂಕೆ ಇದೆ.
ಮಧ್ಯಾಹ್ನ 12.20ರ ಸುಮಾರಿಗೆ ಈ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ. ಸುಮಾರು 22 ಜನರನ್ನು ರಕ್ಷಿಸಲಾಗಿದ್ದು, ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಸಿಕ್ಕಿಂ ಪೊಲೀಸರು, ಸಿಕ್ಕಿಂನ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮತ್ತು ವಾಹನ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.