ಕಾಡು ಪ್ರಾಣಿಗಳು ನಗರಕ್ಕೆ ಲಗ್ಗೆಯಿಡುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗೆ, ಚೀನಾದಲ್ಲಿ ಆನೆಗಳ ಗುಂಪೊಂದು ನಗರಗಳಿಗೆ ಭೇಟಿ ನೀಡಿದ್ದು, ದೊಡ್ಡ ಸುದ್ದಿಯಾಗಿತ್ತು.
ಇದೀಗ ಬೃಹತ್ ಆನಕೊಂಡ ವೊಂದು ಹೆದ್ದಾರಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೌದು, ಈ ಘಟನೆ ನಡೆದಿರುವುದು ಬ್ರೆಜಿಲ್ ನಲ್ಲಿ. ಬೃಹತ್ ಆನಕೊಂಡ(ಹಾವು) ರಸ್ತೆ ಮಧ್ಯದಲ್ಲಿ ಬಂದು ನಿಧಾನಕ್ಕೆ ಹೆದ್ದಾರಿ ದಾಟಿದೆ. ಈ ವೇಳೆ ಬೃಹತ್ ಹಾವು ನೋಡಿದ ಜನರು ದಿಗ್ಭ್ರಮೆಗೊಳಗಾಗಿದ್ದಾರೆ. ತಮ್ಮ ವಾಹನಗಳನ್ನು ನಿಲ್ಲಿಸಿ ಆನಕೊಂಡ ಹೆದ್ದಾರಿ ದಾಟುವ ತನಕ ಕಾದಿದ್ದಾರೆ. ಅದು ರಸ್ತೆ ದಾಟಿ ತನ್ನ ಪಾಡಿಗೆ ಮುಂದೆ ಹೋಗಿದೆ.
ಸೈಕಲ್ ಏರಿ ಫುಡ್ ಡೆಲಿವರಿ ಮಾಡ್ತಿದ್ದಾರೆ ಅಫ್ಘಾನಿಸ್ತಾನದ ಮಾಜಿ ಸಚಿವ…!
ಇನ್ನು ಅಲ್ಲಿದ್ದ ಕೆಲವರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘’ಆನಕೊಂಡ ರಸ್ತೆ ದಾಟಲು ಬ್ರೆಜಿಲ್ ನ ರಸ್ತೆಯಲ್ಲಿ ಸವಾರರು ತಮ್ಮ ಪ್ರಯಾಣವನ್ನು ನಿಲ್ಲಿಸಬೇಕಾಯಿತು” ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ, ಈ ಭಾರಿ ವಿಡಿಯೋ ವೈರಲ್ ಆಗಿದೆ.
https://www.youtube.com/watch?v=RPi2ondSNic