ಜೇನುತುಪ್ಪದಲ್ಲಿರೋ ಆರೋಗ್ಯಕರ ಗುಣಲಕ್ಷಣಗಳ ಬಗ್ಗೆ ನಮಗೆಲ್ಲ ಗೊತ್ತಿದೆ. ಜೇನುತುಪ್ಪ ಉರಿಯೂತಕ್ಕೆ ಪರಿಹಾರ ನೀಡಬಲ್ಲದು. ಜೇನುತುಪ್ಪ ಆಂಟಿಒಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರ ನೀಡಬಲ್ಲದು.
ಗಂಟಲು ನೋವು, ಕೆಮ್ಮು ಮತ್ತು ಮೊಡವೆಗಳನ್ನು ಗುಣಪಡಿಸಲು ಜೇನುತುಪ್ಪವನ್ನು ಬಳಸಲಾಗುತ್ತದೆ. ಜೇನುತುಪ್ಪವನ್ನು ತ್ವಚೆಯ ಮೇಲೆ ಹಚ್ಚಿಕೊಳ್ಳುವುದರಿಂದ ತ್ವಚೆ ತೇವಾಂಶದಿಂದ ಕೂಡಿರುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಪಾದದ ಅಡಿಭಾಗಕ್ಕೆ ಜೇನುತುಪ್ಪದಿಂದ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಅನೇಕ ರೀತಿಯ ಪ್ರಯೋಜನಗಳಿವೆ.
ಚರ್ಮವು ಹೈಡ್ರೇಟ್ ಆಗಿರುತ್ತದೆ: ನಿಮ್ಮ ಚರ್ಮವು ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ಪಾದದ ಅಡಿಭಾಗಕ್ಕೆ ಜೇನುತುಪ್ಪವನ್ನು ಹಚ್ಚಿಕೊಳ್ಳಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ. ತ್ವಚೆಯ ಮೇಲಿರುವ ಕಲೆಗಳೂ ನಿವಾರಣೆಯಾಗಿ ಮುಖ ಹೊಳೆಯುತ್ತದೆ. ಜೇನು ತುಪ್ಪವನ್ನು ಪಾದದ ಅಡಿಭಾಗಕ್ಕೆ ಪ್ರತಿನಿತ್ಯ ಹಚ್ಚಿಕೊಳ್ಳಬೇಕು.
ರಕ್ತ ಪರಿಚಲನೆ ಸುಧಾರಿಸುತ್ತದೆ: ಪಾದದ ಅಡಿಭಾಗಕ್ಕೆ ಜೇನುತುಪ್ಪದಿಂದ ಮಸಾಜ್ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಕೈಕಾಲು ನೋವಿಗೂ ಇದರಿಂದ ಪರಿಹಾರ ಸಿಗುತ್ತದೆ.
ಉರಿಯೂತ ಗುಣಮುಖ: ನಿಮ್ಮ ಕಾಲುಗಳಲ್ಲಿ ಊತವಿದ್ದರೆ ಜೇನುತುಪ್ಪ ಹಚ್ಚುವುದು ಪರಿಣಾಮಕಾರಿ. ಏಕೆಂದರೆ ಜೇನುತುಪ್ಪವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಡೆದ ಹಿಮ್ಮಡಿಗಳು ವಾಸಿಯಾಗುತ್ತವೆ : ಜೇನು ತುಪ್ಪವನ್ನು ಪಾದಕ್ಕೆ ಹಚ್ಚಿದರೆ ಹಿಮ್ಮಡಿಗಳು ಒಡೆಯುವುದಿಲ್ಲ. ಈಗಾಗ್ಲೇ ಹಿಮ್ಮಡಿ ಒಡೆದಿದ್ದರೆ ಅದು ವಾಸಿಯಾಗುತ್ತದೆ. ಜೇನುತುಪ್ಪವು ಪಾದದ ಅಡಿಭಾಗಕ್ಕೆ ತೇವಾಂಶವನ್ನು ಒದಗಿಸುತ್ತದೆ. ಇದರಿಂದ ಬಿರುಕು ಬಿಟ್ಟ ಹಿಮ್ಮಡಿಗಳು ಗುಣವಾಗುತ್ತವೆ.