ತೆಂಗಿನೆಣ್ಣೆಯನ್ನು ಹಿಂದಿನ ಕಾಲದಿಂದಲೂ ಉಪಯೋಗಿಸತ್ತಾ ಬಂದಿದ್ದಾರೆ. ಇದು ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು. ಯಾವುದ್ಯಾವುದೋ ರಾಸಾಯನಿಕ ಕ್ರೀಂ ಗಳನ್ನು ಉಪಯೋಗಿಸಿ ಇರುವ ಅಂದವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ದಿನ ತೆಂಗಿನೆಣ್ಣೆಯನ್ನು ಉಪಯೋಗಿಸಿದರೆ ಸಾಕಷ್ಟು ಲಾಭವಿದೆ.
ಆರೋಗ್ಯಕರವಾದ ತ್ವಚೆಗೆ ತೆಂಗಿನೆಣ್ಣೆ ಉತ್ತಮವಾದ ಜೌಷಧಿಯಾಗಿದೆ. ಸ್ನಾನದ ನಂತರ ನಿಮ್ಮ ಮುಖಕ್ಕೆ ಸ್ವಲ್ಪ ತೆಂಗಿನೆಣ್ಣೆಯಿಂದ ನಿಧಾನಕ್ಕೆ ಮಸಾಜ್ ಮಾಡಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮುಖದ ಒರಟುತನವನ್ನು ಕಡಿಮೆ ಮಾಡುತ್ತದೆ. ನೆರಿಗೆ ಹಾಗೂ ಕಲೆ ಚುಕ್ಕಿಗಳಿಂದ ಮುಖವನ್ನು ರಕ್ಷಿಸುತ್ತದೆ.
ಇನ್ನು ಚರ್ಮದಲ್ಲಿ ಅಲರ್ಜಿ ಸಮಸ್ಯೆ ಇರುವವರಿಗೆ ಗಾಯವಾದವರಿಗೆ ಕೂಡ ಈ ತೆಂಗಿನೆಣ್ಣೆ ಒಂದು ಒಳ್ಳೆಯ ಮದ್ದು ಆಗಿದೆ. ಸೂಕ್ಷ್ಮ ತ್ವಚೆಯವರು ಕೂಡ ಈ ಎಣ್ಣೆಯನ್ನು ಉಪಯೋಗಿಸಬಹುದು.
ಕಣ್ಣಿನ ಸುತ್ತ ಕಪ್ಪು ವರ್ತುಲ ಇರುವವರು, ಮೊಡವೆ ಸಮಸ್ಯೆಯಿಂದ ಬಳಲುವವರು ಹಾಗೂ ಸ್ಟ್ರೇಚ್ ಮಾರ್ಕ್ ಸಮಸ್ಯೆ ಇರುವವರು ಕೂಡ ಇದನ್ನು ಬಳಸಬಹುದು.
ತಲೆಕೂದಲಿನ ಸಮಸ್ಯೆ ಇರುವವರು ತೆಂಗಿನೆಣ್ಣೆಯಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿಕೊಂಡರೆ ತಲೆಹೊಟ್ಟು, ಕೂದಲುದುರುವಿಕೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.