ಶೃಂಗೇರಿ : ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಮತ್ತು ಶೃಂಗೇರಿ ಕುಂಬಾರ ಯುವ ವೇದಿಕೆ ಸಹಯೋಗದಲ್ಲಿ, ಹಾಗೂ ಕುಂಬಾರ ಯಾನೆ ಕುಲಾಲ ಸಂಘದ ಸಾರಥ್ಯದಲ್ಲಿ ಪ್ರಥಮ ವರ್ಷದ ಕ್ರೀಡೋತ್ಸವ ಮತ್ತು ಸತ್ಯನಾರಾಯಣ ಪೂಜೆಯನ್ನು ದಿನಾಂಕ 02.03.2025 ರ ಭಾನುವಾರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿರುವ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಅದೇ ದಿನ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸತ್ಯನಾರಾಯಣ ಪೂಜೆ ನೆರವೇರಲಿದ್ದು, ಭಕ್ತರು ಸಕಾಲಕ್ಕೆ ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗಲು ಕೋರಲಾಗಿದೆ.ಬೆಳಿಗ್ಗೆ 9 ರಿಂದ 1.30 ರವರೆಗೆ ಕ್ರೀಡಾಕೂಟ ನಡೆಯಲಿದೆ, ಜೊತೆಗೆ 1.30 ಕ್ಕೆ ಪ್ರಸಾದ ವಿತರಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಕುಂಬಾರ ಸಮುದಾಯದ ಮಕ್ಕಳು ಮತ್ತು ಯುವ ಸಮುದಾಯದವರಲ್ಲಿ ಕ್ರೀಢಾ ಸ್ಪೂರ್ತಿಯನ್ನು ಹೆಚ್ಚಿಸುವ ಸಲುವಾಗಿ ಸಂಘದ ವತಿಯಿಂದ ಯುವಕ ಯುವತಿಯರಿಗೆ ವಿವಿಧ ಸ್ಪರ್ಧೆಗಳಾದ ಓಟದ ಸ್ಪರ್ಧೆ, ಗೋಲಿ ಹೆಕ್ಕುವಿಕೆ, ವೇಗದ ನಡಿಗೆ, ಗುಂಡು ಎಸೆತ, ದಂಪತಿಗಳ ನಡಿಗೆ, ಕ್ರಿಕೆಟ್, ಮಹಿಳೆಯರಿಗೆ ಸಂಗೀತ ಕುರ್ಚಿ ಹೀಗೆ ಬೇರೆ ಬೇರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಪ್ರಸಾದವನ್ನು ಶ್ರೀ ಶಾರದಾ ಪೀಠಂ, ಶೃಂಗೇರಿ ವತಿಯಿಂದ ಒದಗಿಸಲಿದ್ದಾರೆ.
ಅದೇ ದಿನ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಗಂಗಾಧರ್, ಜಿಲ್ಲಾಧ್ಯಕ್ಷರು, ಸುಜಯಾ ಅನ್ನಪೂರ್ಣೇಶ್ವರಿ ಮಹಿಳಾ ಟ್ರಸ್ಟ್ (ರಿ) ಕಳಸ ಹಾಗೂ ಮೂಡಿಗೆರೆಯ ಕೆ.ಟಿ ಹರೀಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಉದ್ಘಾಟನೆಯನ್ನು ಬೆಂಗಳೂರು ಕುಲಾಲ ಸಮಾಜದ ಉಪಾಧ್ಯಕ್ಷ ಹಾಗೂ ಮಾಜಿ ಯೋಧ ಚಿನ್ನಪ್ಪ ಮಡಿಕೇರಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶೃಂಗೇರಿ ಕುಂಬಾರ ಯುವ ವೇದಿಕೆಯ ಚಂದ್ರಶೇಖರ್ ಎಸ್.ಮೆಣಸೆ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಕುಂಬಾರ ಸಮುದಾಯದ ಭಕ್ತಾಧಿಗಳು ತಮ್ಮ ಕುಟುಂಬದೊಂದಿಗೆ ಆಗಮಿಸಿ ತನು ಮನ ಧನ ನೀಡಿ ಸಹಕರಿಸಬೇಕಾಗಿ ಕೋರಲಾಗಿದೆ.
*ರಂಜಿತ್ ಶೃಂಗೇರಿ

