ಕೈವ್: ಯುದ್ಧಪೀಡಿತ ಉಕ್ರೇನ್ ನಲ್ಲಿ 440ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ರಷ್ಯಾ ವಶದಲ್ಲಿದ್ದ ಇಜಿಯಂ ನಗರದ ಬಳಿ ಶವಗಳ ಸಮಾಧಿ ಪತ್ತೆಯಾಗಿದೆ. ಯುದ್ಧದ ವೇಳೆ ಮೃತಪಟ್ಟಿದ್ದವರ ಸಾಮೂಹಿಕ ಶವಸಂಸ್ಕಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಒಂದೇ ಕಡೆ 440ಕ್ಕೂ ಹೆಚ್ಚು ಶವಗಳನ್ನು ಸಂಸ್ಕಾರ ಮಾಡಲಾಗಿದೆ.
ರಷ್ಯಾದ ಪಡೆಗಳಿಂದ ಮರು ವಶಪಡಿಸಿಕೊಂಡ ಉಕ್ರೇನ್ ಪೂರ್ವ ನಗರವಾದ ಇಜಿಯಂನಲ್ಲಿ 440 ಕ್ಕೂ ಹೆಚ್ಚು ಶವಗಳ ಸಾಮೂಹಿಕ ಸಮಾಧಿಯನ್ನು ಉಕ್ರೇನಿಯನ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಖಾರ್ಕಿವ್ ಪ್ರದೇಶದ ಮುಖ್ಯ ಪೊಲೀಸ್ ತನಿಖಾಧಿಕಾರಿ ಸೆರ್ಹಿ ಬೊಲ್ವಿನೋವ್ ಅವರು ತಿಳಿಸಿದ್ದಾರೆ.
ಶೆಲ್ ದಾಳಿ ಮತ್ತು ವೈಮಾನಿಕ ದಾಳಿಯಿಂದ ಕೆಲವು ಜನರು ಸಾವನ್ನಪ್ಪಿದ್ದಾರೆ. ಪ್ರತಿ ಮೃತದೇಹವನ್ನು ಫೋರೆನ್ಸಿಕ್ ತನಿಖೆಗೆ ಒಳಪಡಿಸಲಾಗುವುದು. ರಷ್ಯಾದಿಂದ ಮರಳಿ ಪಡೆದ ಇಜಿಯಂ ನಗರದಲ್ಲಿ 440 ಕ್ಕೂ ಅಧಿಕ ಶವಗಳ ಸಾಮೂಹಿಕ ಸಮಾಧಿ ಮಾಡಲಾಗಿದ್ದು, ಮರು ವಶಕ್ಕೆ ಪಡೆದ ಪ್ರದೇಶಗಳಲ್ಲಿ ಇದು ದೊಡ್ಡ ಸಮಾಧಿ ಸ್ಥಳಗಳಲ್ಲಿ ಒಂದಾಗಿದೆ ಎಂದು ಬೊಲ್ವಿನೋವ್ ಹೇಳಿದರು.