ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಾಷಣ ಮಾಡುತ್ತಿದ್ದ ಮೌಲಾನಾ ಮಸೂದ್ ಉರ್ ರೆಹಮಾನ್ ಉಸ್ಮಾನಿ ಅನಾಮಧೇಯರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಪಾಕಿಸ್ತಾನದ ಫೆಡರಲ್ ರಾಜಧಾನಿಯ ಪೊಲೀಸರು ಶುಕ್ರವಾರ ನಗರದ ಹೊರವಲಯದಲ್ಲಿ ನಡೆದ ಗುಂಡಿನ ದಾಳಿಯನ್ನು ದೃಢಪಡಿಸಿದ್ದು, ದಾಳಿಯಲ್ಲಿ ಮೌಲಾನಾ ಮಸೂದ್-ಉರ್-ರೆಹಮಾನ್ ಉಸ್ಮಾನಿ ಹತ್ಯೆಯಾಗಿದೆ ಎಂದು ದೃಢಪಡಿಸಲಾಗಿದೆ.
ಉಸ್ಮಾನಿ ಅವರನ್ನು ಸುನ್ನಿ ಉಲೇಮಾ ಕೌನ್ಸಿಲ್ನ ಕೇಂದ್ರ ಉಪ ಪ್ರಧಾನ ಕಾರ್ಯದರ್ಶಿ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಸ್ಥಳೀಯ ಹೌಸಿಂಗ್ ಸೊಸೈಟಿಯಲ್ಲಿ ಮೌಲ್ವಿಯನ್ನು ಅವರ ವಾಹನದಲ್ಲಿ ಗುರಿಯಾಗಿಸಿಕೊಂಡು ನಡೆದ ದಾಳಿಯ ಜವಾಬ್ದಾರಿಯನ್ನು ಇಲ್ಲಿಯವರೆಗೆ ಯಾವುದೇ ಗುಂಪು ವಹಿಸಿಕೊಂಡಿಲ್ಲ.