ನವದೆಹಲಿ: ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಇತ್ತೀಚೆಗೆ ಬಹವಾಲ್‌ಪುರದಲ್ಲಿ ಸಾರ್ವಜನಿಕ ಭಾಷಣ ಮಾಡಿದ ವರದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನವನ್ನು ಭಾರತೀಯ ಅಧಿಕಾರಿಗಳು ಖಂಡಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅಜರ್ ನ ಚಟುವಟಿಕೆಗಳ ಬಗ್ಗೆ ಕ್ರಮಕೈಗೊಳ್ಳದ ಪಾಕಿಸ್ತಾನದ ನಿಷ್ಕ್ರಿಯತೆ ಖಂಡಿಸಿದ್ದು, ಭಯೋತ್ಪಾದಕ ನಾಯಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ MEA ವಕ್ತಾರ ರಣಧೀರ್ ಜೈಸ್ವಾಲ್, ಭಾರತದ ಮೇಲೆ ಅನೇಕ ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿರುವ ಅಜರ್ ವಿರುದ್ಧ ಪಾಕಿಸ್ತಾನವು “ಬಲವಾದ ಕ್ರಮ” ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದು, ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದ “ದ್ವಂದ್ವ” ನಿಲುವು ಹೊಂದಿದೆ ಎಂದು ಟೀಕಿಸಿದ್ದಾರೆ.
ಅಜರ್ ಪಾಕಿಸ್ತಾನದಲ್ಲಿ ಇಲ್ಲ ಎಂದು ನಿರಾಕರಿಸಲಾಗಿದೆ, ಮತ್ತು ವರದಿಗಳು ಸರಿಯಾಗಿದ್ದರೆ, ಅದು ಪಾಕಿಸ್ತಾನದ ದ್ವಂದ್ವವನ್ನು ಬಹಿರಂಗಪಡಿಸುತ್ತದೆ. 2001 ರ ಸಂಸತ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದ ನೆಲದಲ್ಲಿ ಕೆಲವು ಭಯೋತ್ಪಾದಕ ಘಟನೆಗಳೊಂದಿಗೆ ಅಜರ್ ಸಂಬಂಧ ಹೊಂದಿದ್ದಾನೆ.