ಲಂಡನ್ : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ತನ್ನ ಮೇಲೆ ನಡೆದ ಹಲ್ಲೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫುಟ್ ಬಾಲ್ ಆಟಗಾರನನ್ನು ಅಮಾನತು ಮಾಡಲಾಗಿದೆ.
ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ನ ಆಟಗಾರ ಮೇಸನ್ ಗ್ರೀನ್ ವುಡ್ ಎಂಬುವವರೇ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಅತ್ಯಾಚಾರ ಕೂಡ ನಡೆಸಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಹೀಗಾಗಿ ಮ್ಯಾಚೆಂಸ್ಟರ್ ಯುನೈಟೆಡ್ ಕ್ಲಬ್, ತನ್ನ ಆಟಗಾರನನ್ನು ಅಮಾನತು ಮಾಡಿದೆ. ಸದ್ಯ ಮಹಿಳೆ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಮಹಿಳೆಯು, ಇನ್ ಸ್ಟಾ ಗ್ರಾಮ್ ನಲ್ಲಿ ವಿಡಿಯೋ, ಆಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿ ಆ ನಂತರ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಿ ಫೋಟೋಗಳು ಶೇರ್ ಆಗಿದ್ದವು.
ಹೀಗಾಗಿಯೇ ಕ್ಲಬ್ ಅವರನ್ನು ಅಮಾನತು ಮಾಡಿ, ಪೊಲೀಸ್ ತನಿಖೆಯ ಸೂಚನೆ ಬರುವವರೆಗೂ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಗ್ರೀನ್ ವುಡ್ ರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.