ಮಂಡ್ಯ: ಸರ್ಕಾರದ ವೀಕೆಂಡ್ ಕರ್ಫ್ಯೂಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಎಲ್ಲ ಅರ್ಹರಿಗೂ ಲಸಿಕೆ ನೀಡಲಿ, ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಿ. ನನ್ನ ಪ್ರಕಾರ ವೀಕೆಂಡ್ ಕರ್ಫ್ಯೂ ಬೇಕಿಲ್ಲ ಎಂದು ತಿಳಿಸಿದ್ದಾರೆ.
ಮಾಸ್ಕ್ ಹಾಕಲ್ಲ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ಧರಾಮಯ್ಯ, ಉಮೇಶ್ ಕತ್ತಿ ಸಚಿವರಾಗಿರಲು ಲಾಯಕ್ಕಾ? ಸರ್ಕಾರ ನಡೆಸಲು ಲಾಯಕ್ಕಾ? ಮಂತ್ರಿ ಮಾಸ್ಕ್ ಹಾಕಲ್ಲ ಅಂದ್ರೆ ಜನ ಏಕೆ ಮಾಸ್ಕ್ ಹಾಕಬೇಕು? ಎಂದು ಪ್ರಶ್ನಿಸಿದ್ದಾರೆ.
ಮಾಸ್ಕ್ ಧರಿಸದ ಜನರ ವಿರುದ್ಧ ಕೇಸು ದಾಖಲಿಸುತ್ತಾರೆ. ಮಂತ್ರಿ ಮೇಲೆ ಕೇಸು ಹಾಕಬೇಕೇ? ಬೇಡವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರದು ಯಾವಾಗಲೂ ದ್ವಂದ್ವ ನಿಲುವು. ಬಿಜೆಪಿಯವರಿಂದಲೇ ಕೊರೋನಾ ನಿಯಮ ಉಲ್ಲಂಘನೆಯಾಗಿದೆ ಎಂದು ಟೀಕಿಸಿದ್ದಾರೆ.