alex Certify ರಾಜ್ಯದಲ್ಲಿ ಕೊರೊನಾ ಮತ್ತೆ ಏರಿಕೆ: ಆಫೀಸ್, ಟಾಕೀಸ್, ಹೋಟೆಲ್, ಶಾಪಿಂಗ್ ಮಾಲ್, ಬಸ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಕೊರೊನಾ ಮತ್ತೆ ಏರಿಕೆ: ಆಫೀಸ್, ಟಾಕೀಸ್, ಹೋಟೆಲ್, ಶಾಪಿಂಗ್ ಮಾಲ್, ಬಸ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.

ಕೊರೋನಾ ಏರಿಕೆ ಕಂಡ ಹಿನ್ನಲೆ ಮತ್ತು ಹಬ್ಬಗಳ ದಿನಗಳಲ್ಲಿ ಜನ ಸೇರುವುದರರಿಂದ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ವಸತಿ ಸಮುಚ್ಚಯಗಳ ಸಾಮಾನ್ಯ ಪ್ರದೇಶಗಳು, ಚಿತ್ರಮಂದಿರಗಳು, ಶಾಪಿಂಗ್ ಮಾಲ್ ಗಳು, ಬಸ್, ಮೆಟ್ರೋ, ರೈಲು ಇತರೆ ಸಾಮಾನ್ಯ ಪ್ರದೇಶಗಳಲ್ಲಿ ಹೋಟೆಲ್, ಪಬ್, ರೆಸ್ಟೋರೆಂಟ್, ಕ್ಲಬ್, ಬಾರ್ ಗಳಲ್ಲಿ ಆಹಾರ ಸೇವನೆ ಅವಧಿ ಹೊರತುಪಡಿಸಿ ಉಳಿದಂತೆ ಮಾಸ್ಕ್ ಧರಿಸಿರಬೇಕು. ಶಾಲೆಗಳಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬೇಕು ಎಂದು ತಿಳಿಸಲಾಗಿದೆ.

ಗೌರಿ ಗಣೇಶ ಹಬ್ಬ, ಓಣಂ, ಮಹಾಲಯ ಅಮಾವಾಸ್ಯೆ, ವಿಶ್ವಕರ್ಮ ಜಯಂತಿ ಹಬ್ಬ ಹರಿದಿನಗಳಂದು ಜನ ಗುಂಪು ಸೇರಬಾರದು. ಹೊರಾಂಗಣದಲ್ಲಿ ಗಣೇಶೋತ್ಸವ ಆಚರಿಸಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಅಳವಡಿಸಬೇಕು. ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...