ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ ಬಹಿರಂಗವಾಗಿದೆ.
ಹಪ್ಪಳವನ್ನು ಕೆಡದಂತೆ ರಕ್ಷಿಸಲು ರಾಸಾಯನಿಕವನ್ನು ಬಳಸ್ತಾರೆ. ಅದ್ರಲ್ಲಿ ಉಪ್ಪು ಹಾಗೂ ಸೋಡಿಯಂ ಲವಣಗಳು ಸೇರಿರುತ್ತವೆ. ಇದು ಹಪ್ಪಳದ ರುಚಿಯನ್ನು ಹೆಚ್ಚಿಸುತ್ತದೆ. ಆದ್ರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹಪ್ಪಳದಲ್ಲಿ ಬಳಸುವ ಸಂರಕ್ಷಕಗಳಿಂದಾಗಿ ಕಿಡ್ನಿ ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಹಪ್ಪಳದಲ್ಲಿ ಎರಡು ರೊಟ್ಟಿಯಷ್ಟು ಕ್ಯಾಲೋರಿ ಇರುತ್ತದೆ. ಇದನ್ನು ತಿನ್ನುವುದರಿಂದ ಬೊಜ್ಜು ಬರುವ ಸಂಭವ ಜಾಸ್ತಿ ಇದೆ.
ಮಸಾಲೆ ಹಾಗೂ ಆರ್ಟಿಫಿಶಿಯಲ್ ಕಲರ್ ಬಳಸುವುದರಿಂದ ಎಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.