ಟೋಕಿಯೋ ಒಲಿಂಪಿಕ್ಸ್ನ ಮಹಿಳೆಯರ ಬಾಕ್ಸಿಂಗ್ನಲ್ಲಿ ಮೇರಿ ಕೋಮ್ ಸೋಲನ್ನು ಕಂಡು ಅಳುತ್ತಿದ್ದ ತಮ್ಮ ಟೀನೇಜ್ ಅಭಿಮಾನಿಯೊಬ್ಬಳ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಹುಡುಗಿಯನ್ನು ಖುದ್ದು ಭೇಟಿಯಾಗಿರುವ ಮೇರಿ ಕೋಮ್, ಆಕೆಯನ್ನು ಸಂತೈಸಿದ್ದಾರೆ.
ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧದ ಪಂದ್ಯವೊಂದರಲ್ಲಿ ಸೋಲು ಕಂಡ ಮೇರಿ ಕೋಮ್ ನಿರ್ಗಮನವನ್ನು ಅರಗಿಸಿಕೊಳ್ಳಲಾಗದ ಆಕೆಯ ಈ ಅಭಿಮಾನಿ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡಿದ ಮೈನಾ ಹಕ್ಕಿ
ತಮ್ಮ ಅಪ್ಪಟ ಅಭಿಮಾನಿಯೊಂದಿಗಿನ ವಿಡಿಯೋ ಶೇರ್ ಮಾಡಿಕೊಂಡ ಮೇರಿ, “ನಲ್ಮೆಯ ಸಹೋದರಿಯರೇ….. ಭೇಟಿಯಾಗುವ ಅವಕಾಶ ಸಿಕ್ಕರೆ ನಿಮ್ಮನ್ನು ಅಪ್ಪಿ ಸಲ್ಯೂಟ್ ಮಾಡುವೆ. ಬಾಕ್ಸಿಂಗ್ ಅಥವಾ ಯಾವುದಾದರೂ ಕ್ರೀಡೆಯಲ್ಲಿ ನೀವು ಆಸಕ್ತರಾಗಿದ್ದರೆ, ನಾನು ನಿಮ್ಮನ್ನು ಬೆಂಬಲಿಸಲು ಖುಷಿ ಪಡುತ್ತೇನೆ” ಎಂದಿದ್ದಾರೆ.
https://www.youtube.com/watch?v=4qbCwkkBm0w&feature=youtu.be