ಮುಂದಿನ ತಿಂಗಳು ಮಾರುತಿ ಕಂಪನಿಯ ಕಾರು ಖರೀದಿರುವ ಆಲೋಚನೆಯಲ್ಲಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಮುಂದಿನ ತಿಂಗಳಿನಿಂದ ಮಾರುತಿ ಕಾರಿನ ಬೆಲೆಯಲ್ಲಿ ಏರಿಕೆಯಾಗಲಿದೆ. ಮುಂದಿನ ತಿಂಗಳಿನಿಂದ ಅಂದರೆ ಜುಲೈನಿಂದ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಘೋಷಿಸಿದೆ.
ಈ ವರ್ಷ ಮಾರುತಿಯ ಕಾರುಗಳ ಬೆಲೆ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದೆ. ಮೂರನೇ ಬಾರಿ ಮತ್ತೆ ಏರಿಕೆಯಾಗಲಿದೆ. ಇದಕ್ಕೂ ಮೊದಲು ಜನವರಿ 2021 ಮತ್ತು ಏಪ್ರಿಲ್ 2021 ರಲ್ಲಿ ಮಾರುತಿ ಕಾರುಗಳ ಬೆಲೆ ಹೆಚ್ಚಾಗಿತ್ತು. ಬೆಲೆ ಎಷ್ಟು ಹೆಚ್ಚಾಗಲಿದೆ ಎನ್ನುವ ಬಗ್ಗೆ ಕಂಪನಿ ಇನ್ನೂ ಮಾಹಿತಿ ನೀಡಿಲ್ಲ.
ವಾಹನ ತಯಾರಿಗೆ ಬಿಡಿ ಭಾಗಗಳ ಬೆಲೆ ಹೆಚ್ಚಾಗಿದೆ. ವೆಚ್ಚದ ಹೊಣೆಯನ್ನು ಗ್ರಾಹಕರ ತಲೆ ಮೇಲೆ ಹಾಕಲು ಕಂಪನಿ ಮುಂದಾಗಿದೆ. ಮಾದರಿ ಹಾಗೂ ರೇಂಜ್ ಆಧರಿಸಿ ಜನವರಿಯಲ್ಲಿ ಬೆಲೆ ಹೆಚ್ಚಳ ಮಾಡಲಾಗಿತ್ತು. ಕಾರಿನ ಬೆಲೆ 34000 ರೂಪಾಯಿವರೆಗೆ ಹೆಚ್ಚಳ ಕಂಡಿತ್ತು. ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ಕಾರಣದಿಂದಾಗಿ ಕಂಪನಿಯು ತನ್ನ ಎಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.