ಕಾರು ಕೊಳ್ಳುವವರಿಗೆ ಸಿಹಿಸುದ್ದಿ… ಮಾರುತಿ ಸುಜುಕಿ ಇಂಡಿಯಾ ಸ್ವಿಫ್ಟ್ ಸಿಎನ್ ಜಿ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಹೊಸ ಅವತಾರದಲ್ಲಿ, ಸ್ವಿಫ್ಟ್ ಸಿಎನ್ ಜಿ ಹೆಚ್ಚಿನ ಟಾರ್ಕ್, ಉತ್ತಮ ಇಂಧನ ದಕ್ಷತೆ ಮತ್ತು ಹೆಚ್ಚುವರಿ ರೂಪಾಂತರವನ್ನು ಹೊಂದಿದೆ.
ಸ್ವಿಫ್ಟ್ ಸಿಎನ್ ಜಿ ಪರಿಚಯಿಸುವುದರೊಂದಿಗೆ, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯು ಈಗ ತನ್ನ ಪೋರ್ಟ್ ಫೋಲಿಯೊದಲ್ಲಿ 14 ಸಿಎನ್ ಜಿ ಮಾದರಿಗಳನ್ನು ಹೊಂದಿದೆ.ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಬಿಡುಗಡೆಯಾದ ನಾಲ್ಕು ತಿಂಗಳ ನಂತರ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್ ಜಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಮೇ 2024 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು.
ಬೆಲೆ
ಸ್ವಿಫ್ಟ್ ವಿಎಕ್ಸ್ಐ ಸಿಎನ್ಜಿ 8.19 ಲಕ್ಷ ರೂ.
ಸ್ವಿಫ್ಟ್ ವಿಎಕ್ಸ್ಐ (ಒ) ಸಿಎನ್ಜಿ 8.46 ಲಕ್ಷ ರೂ.
ಸ್ವಿಫ್ಟ್ ಝಡ್ಎಕ್ಸ್ಐ ಸಿಎನ್ಜಿ 9.19 ಲಕ್ಷ ರೂ.