ಮಾರುತಿ ಸುಜುಕಿಯ 9,925 ಕಾರುಗಳಲ್ಲಿ ದೋಷ ಕಂಡು ಬಂದಿದೆ ಎನ್ನಲಾಗಿದ್ದು, ಇವುಗಳನ್ನು ವಾಪಸ್ ಕರೆಯಿಸಿಕೊಂಡು ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. 2022ರ ಆಗಸ್ಟ್ 3ರಿಂದ ಸೆಪ್ಟೆಂಬರ್ 1ರ ಅವಧಿಯಲ್ಲಿ ಈ ಕಾರುಗಳನ್ನು ಉತ್ಪಾದಿಸಲಾಗಿತ್ತು ಎಂದು ತಿಳಿದು ಬಂದಿದೆ.
ಈ ಕಾರುಗಳ ಹಿಂಬದಿ ಬ್ರೇಕ್ ನಲ್ಲಿ ದೋಷ ಕಂಡುಬರುತ್ತಿದೆ ಎನ್ನಲಾಗಿದ್ದು, ಇದರಿಂದಾಗಿ ಸದ್ದು ಬರುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇದು ಜಾಸ್ತಿಯಾಗುವ ಸಾಧ್ಯತೆ ಇರುವುದರಿಂದ ಕಾರುಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
ಅಗತ್ಯವಿದ್ದರೆ ಅಸೆಂಬ್ಲಿಯ ಇಡೀ ಯೂನಿಟ್ ಅನ್ನು ಉಚಿತವಾಗಿ ಬದಲಾಯಿಸಿ ಕೊಡಲಾಗುತ್ತದೆ. ಮಾರುತಿ ಸುಜುಕಿ ಈಗಾಗಲೇ ತನ್ನ ಡೀಲರ್ಗಳಿಗೆ ಈ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದ್ದು, ಕಾರುಗಳನ್ನು ತರಿಸಿಕೊಳ್ಳುವ ಕಾರ್ಯ ನಡೆಯುತ್ತದೆ.