ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಪೆಟ್ರೋಲ್ನಿಂದ ಚಲಿಸುತ್ತಿರುವ ಕೆಲ ಸಿಯಾಜ್, ಎರ್ಟಿಗಾ, ಬ್ರೆಜಾ, ಎಸ್ ಕ್ರಾಸ್ ಹಾಗೂ ಎಕ್ಸ್ಎಲ್ 6 ವಾಹನಗಳನ್ನು ಗ್ರಾಹಕರಿಂದ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದೆ.
2018 ಮೇ 4 ರಿಂದ 2020 ರ ಅಕ್ಟೋಬರ್ 27ರ ಒಳಗೆ ತಯಾರಾದ ಈ ಕಾರುಗಳಲ್ಲಿ 181,754 ಯುನಿಟ್‌ಗಳಲ್ಲಿ ಸಂಭಾವ್ಯ ದೋಷ ಇದೆಯೇ ಎಂದು ಪರೀಕ್ಷೆ ಮಾಡಲು ವಾಹನಗಳನ್ನು ಹಿಂಪಡೆಯುತ್ತಿರುವುದಾಗಿ ಕಂಪನಿ ಹೇಳಿದೆ.
ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾರುತಿ ಸುಜುಕಿ ಕಂಪನಿ ಸ್ವಯಂ ಪ್ರೇರಿತವಾಗಿ ಕೆಲ ಆಯ್ದ ವಾಹನಗಳ ಜನರೇಟರ್ ಘಟಕದ ತಪಾಸಣೆ ಅಥವಾ ಮರುಜೋಡಣೆ ಕಾರ್ಯವನ್ನು ಉಚಿತವಾಗಿ ಮಾಡಿಕೊಡುವ ಸಲುವಾಗಿ ಗ್ರಾಹಕರಿಂದ ಕಾರುಗಳನ್ನು ಹಿಂಪಡೆಯುತ್ತಿದೆ. ಸಂಬಂಧಪಟ್ಟ ಗ್ರಾಹಕರು ಅಧಿಕೃತ ಶಾಖೆಗಳಿಂದ ಈ ಬಗ್ಗೆ ಸಂದೇಶ ಸ್ವೀಕರಿಸಲಿದ್ದಾರೆ ಎಂದು ಕಂಪನಿ ಹೇಳಿದೆ.
ನ್ಯೂನ್ಯತೆ ಹೊಂದಿರುವ ಭಾಗಗಳ ತಪಾಸಣೆ ಅಥವಾ ಮರುಜೋಡಣೆ ಕಾಯಕವು ನವೆಂಬರ್ ಮೊದಲ ವಾರದಿಂದ ಆರಂಭಗೊಳ್ಳಲಿದೆ. ಅಲ್ಲಿಯವರೆಗೆ ಗ್ರಾಹಕರಿಗೆ ನೀರು ಹೆಚ್ಚಿರುವ ಜಾಗಗಳಲ್ಲಿ ವಾಹನ ಚಾಲನೆ ಹಾಗೂ ಕಾರಿನಲ್ಲಿರುವ ಎಲೆಕ್ಟ್ರಾನಿಕ್ ಭಾಗಗಳ ಮೇಲೆ ನೀರು ಬೀಳದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದೆ.
ದೋಷವುಳ್ಳ ಕಾರುಗಳನ್ನು ಹೊಂದಿರುವ ಮಾಲೀಕರು www.marutisuzuki.com ( ಎರ್ಟಿಗಾ ಹಾಗೂ ಬ್ರೆಜಾ) ಹಾಗೂ www.nexaexperience.com ( ಸಿಯಾಜ್, ಎಕ್ಸ್ಎಲ್ 6 ಹಾಗೂ ಎಸ್ ಕ್ರಾಸ್ ) ವೆಬ್ಸೈಟ್ಗೆ ತೆರಳಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.