ಏರ್ ಬ್ಯಾಗ್ ಕಂಟ್ರೋಲರ್ ನಲ್ಲಿ ದೋಷ ಕಾಣಿಸಿಕೊಂಡಿರುವ ಪರಿಣಾಮ ಮಾರುತಿ ಸುಜುಕಿ 17,362 ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದೆ. ಡಿಸೆಂಬರ್ 8, 2022 ರಿಂದ ಜನವರಿ 12, 2023 ರ ಅವಧಿಯಲ್ಲಿ ಉತ್ಪನ್ನವಾದ ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ವಾಹನಗಳ ಪೈಕಿ ಆಲ್ಟೋ k10, S ಪ್ರೆಸ್ಸೋ, ಇಕೋ, ಬ್ರಿಜಾ ಬಲೇನೋ ಹಾಗೂ ಗ್ರಾಂಡ್ ವಿಟಾರ ಸೇರಿವೆ. ಈ ವಾಹನಗಳನ್ನು ಹಿಂದಕ್ಕೆ ಕರಿಸಿಕೊಂಡು ಪರಿಶೀಲಿಸಿದ ಬಳಿಕ ಅಗತ್ಯವಿದ್ದರೆ ಉಚಿತವಾಗಿ ಏರ್ ಬ್ಯಾಗ್ ಕಂಟ್ರೋಲರ್ ಬದಲಿಸಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದರ ಮಧ್ಯೆ ವಾಹನ ಮಾಲೀಕರಿಗೆ ಮಹತ್ವದ ಸೂಚನೆಗಳನ್ನ ನೀಡಿದ್ದು, ದೋಷ ಪೂರಿತ ಏರ್ ಬ್ಯಾಗ್ ಕಂಟ್ರೋಲರ್ ಬದಲಿಸುವವರೆಗೂ ವಾಹನ ಬಳಸಬಾರದು ಎಂದು ಮನವಿ ಮಾಡಲಾಗಿದೆ. ಈಗಾಗಲೇ ಈ ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಈ ಕುರಿತು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.