ಮಾರುತಿ ಸುಜುಕಿಯು ತನ್ನ ಕಾರುಗಳ ಮಾರಾಟ ಉತ್ತೇಜಿಸಲು ಡಿಸ್ಕೌಂಟ್ ಘೋಷಿಸಿದೆ. ವ್ಯಾಗನ್ ಆರ್, ಸೆಲೆರಿಯೊ, ಆಲ್ಟೊ, ಬಲೆನೊ ಒಳಗೊಂಡಂತೆ ಅರೆನಾ ಮತ್ತು ನೆಕ್ಸಾ ಮಾದರಿಗಳಲ್ಲಿ ಮಾರುತಿ ಸುಜುಕಿ ಈ ತಿಂಗಳು ಕೆಲವು ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ.
ವರ್ಷದ ಆರಂಭದಲ್ಲಿ ಉತ್ಪಾದನೆ ಮತ್ತು ಸಾರಿಗೆ ವೆಚ್ಚಗಳ ಹೆಚ್ಚಳದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಾಹನ ಬೆಲೆಯನ್ನು ಹೆಚ್ಚಿಸಿದೆ.
ಕಾರು ತಯಾರಕರ ರಿಯಾಯಿತಿಯು ನಗದು, ವಿನಿಮಯ ಕೊಡುಗೆಗಳು ಮತ್ತು ಕಾರ್ಪೊರೇಟ್ ರಿಯಾಯಿತಿ ಒಳಗೊಂಡಿದೆ. ಈ ರಿಯಾಯಿತಿಗಳು ಡೀಲರ್‌ಶಿಪ್‌ನ ಸ್ಥಳದೊಂದಿಗೆ ಬದಲಾಗಬಹುದು ಎಂಬುದನ್ನು ಗಮನಿಸಬೇಕು.
ಮಾರುತಿ ಸುಜುಕಿ ಇಗ್ನಿಸ್:
ನೆಕ್ಸಾ ಸರಣಿಯ ಅತ್ಯಂತ ಅಗ್ಗದ ಮಾದರಿಯಾದ ಮಾರುತಿ ಸುಜುಕಿ ಇಗ್ನಿಸ್‌ನ ಮ್ಯಾನುವಲ್ ಆವೃತ್ತಿಯ ಮೇಲೆ ರೂ. 20,000 ನಗದು ರಿಯಾಯಿತಿ ಇದೆ. ಇಗ್ನಿಸ್‌ನ ಎಎಂಟಿ ಆವೃತ್ತಿಯಲ್ಲಿ ಪ್ರಸ್ತುತ ಯಾವುದೇ ಕ್ಯಾಶ್‌ಬ್ಯಾಕ್ ಕೊಡುಗೆಗಳಿಲ್ಲ. ಎಲ್ಲಾ ಇಗ್ನಿಸ್ ವೇರಿಯಂಟ್‌ಗಳಿಗೆ ರೂ. 10,000 ವಿನಿಮಯ ಪ್ರೋತ್ಸಾಹ ಮತ್ತು ರೂ. 3,000 ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ.
ಮಾರುತಿ ಸುಜುಕಿ ಸಿಯಾಜ್:
ಮಾರುತಿ ಸುಜುಕಿ ಸಿಯಾಜ್‌ಗೆ ಪ್ರಸ್ತುತ ಯಾವುದೇ ನಗದು ರಿಯಾಯಿತಿ ಲಭ್ಯವಿಲ್ಲ, ಆದರೆ ಸೆಡಾನ್‌ಗೆ ರೂ. 25,000 ವಿನಿಮಯ ಪ್ರೋತ್ಸಾಹ ಸಿಗಲಿದೆ ಮತ್ತು ರೂ. 5,000 ಕಾರ್ಪೊರೇಟ್ ರಿಯಾಯಿತಿಗಳು ಸಹ ಸಿಗಲಿದೆ. ಪ್ರಸ್ತುತ ಎಕ್ಸ್ ಎಲ್ 6 ಮತ್ತು ಇತ್ತೀಚೆಗೆ ಘೋಷಿಸಲಾದ ಬಲೆನೋ ಮೇಕ್ ಓವರ್‌ಗೆ ಯಾವುದೇ ಅಧಿಕೃತ ವಿಶೇಷ ಕೊಡುಗೆಗಳು ಲಭ್ಯವಿಲ್ಲ.
ಮಾರುತಿ ಸುಜುಕಿ ಎಸ್-ಕ್ರಾಸ್:
ಎಸ್-ಕ್ರಾಸ್‌ನ ಝೀಟಾ ಟ್ರಿಮ್‌ನೊಂದಿಗೆ ರೂ. 17,000 ನಗದು ರಿಯಾಯಿತಿಯನ್ನು ನೀಡಲಾಗುತ್ತದೆ. ರೂ.25,000 ವಿನಿಮಯ ಬೋನಸ್ ಮತ್ತು ರೂ 5,000 ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್:
ವ್ಯಾಗನ್ ಆರ್‌ನ 1.0-ಲೀಟರ್ ವೇರಿಯಂಟ್‌ಗೆ ರೂ 31,000 ವರೆಗೆ ರಿಯಾಯಿತಿ ಸಿಗಲಿದೆ. 1.2 ವೇರಿಯಂಟ್ ಗೆ 26 ಸಾವಿರ ರೂ.ವರೆಗೆ ರಿಯಾಯಿತಿ ನಿಗದಿಪಡಿಸಲಾಗಿದೆ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ:
ಮಾರುತಿ ಸುಜುಕಿ ಎಸ್-ಪ್ರೆಸ್ಸೊ ನಗದು ಮತ್ತು ಕಾರ್ಪೊರೇಟ್ ರಿಯಾಯಿತಿಗಳೊಂದಿಗೆ ವಿನಿಮಯ ಬೋನಸ್ ಸಂಯೋಜನೆಯೊಂದಿಗೆ ಮ್ಯಾನುಯಲ್ ವೇರಿಯಂಟ್‌ಗಳಿಗೆ ರೂ. 31,000ವರೆಗಿನ ಪ್ರಯೋಜನ ನೀಡಲಾಗುತ್ತಿದೆ. ಎಎಂಟಿ ವೇರಿಯಂಟ್ ರೂ. 16,000 ಪ್ರಯೋಜನಗಳೊಂದಿಗೆ ಲಭ್ಯವಿದೆ.
ಎಸ್-ಪ್ರೆಸ್ಸೊದ ಸಿಎನ್‌ಜಿ ವೇರಿಯಂಟ್ ಯಾವುದೇ ಕೊಡುಗೆ ಪಡೆಯುವುದಿಲ್ಲ.
ಮಾರುತಿ ಸುಜುಕಿ ಸೆಲೆರಿಯೊ:
ಮಾರುತಿ ಸುಜುಕಿ ಸೆಲೆರಿಯೊ ಎಲ್ಲಾ ವೇರಿಯಂಟ್‌ಗಳಿಗೆ 26,000 ರೂ.ವರೆಗೆ ರಿಯಾಯಿತಿ ಸಿಗಲಿದೆ. ಮಾರುತಿ ಸುಜುಕಿ ಸ್ವಿಫ್ಟ್‌ಗೆ ಮ್ಯಾನುವಲ್ ವೇರಿಯಂಟ್‌ಗೆ ರೂ 25,000 ವರೆಗಿನ ನಗದು ರಿಯಾಯಿತಿ, ಎಎಂಟಿ ವೇರಿಯಂಟ್‌ಗೆ ಗರಿಷ್ಠ 17,000 ರೂ.ವರೆಗಿನ ಪ್ರಯೋಜನ ಸಿಗಲಿದೆ.