alex Certify ಲಡಾಖ್ ನಲ್ಲಿ ಮಾರುತಿ ಸುಜುಕಿ ಜಿಮ್ನಿ ಜಾಹೀರಾತು ಶೂಟಿಂಗ್: ಕಂಪನಿ ವಿರುದ್ಧ ಸ್ಥಳೀಯ ಸಂಸದರಿಂದ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಡಾಖ್ ನಲ್ಲಿ ಮಾರುತಿ ಸುಜುಕಿ ಜಿಮ್ನಿ ಜಾಹೀರಾತು ಶೂಟಿಂಗ್: ಕಂಪನಿ ವಿರುದ್ಧ ಸ್ಥಳೀಯ ಸಂಸದರಿಂದ ದೂರು

ಮಾರುತಿ ಸುಜುಕಿ ತನ್ನ ಬಹು ನಿರೀಕ್ಷಿತ ಎಸ್ ಯು ವಿ ಹೊಸ ಮಾಡೆಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮಧ್ಯೆ ವಾಹನದ ಜಾಹೀರಾತನ್ನು ಲಡಾಖ್ ನಲ್ಲಿ ಚಿತ್ರೀಕರಿಸಿದೆ. ಹೀಗಾಗಿ ಕಂಪನಿ ವಿರುದ್ಧ ಪರಿಸರ ವ್ಯವಸ್ಥೆಗೆ ಹಾನಿ ಮಾಡಿದ್ದಕ್ಕಾಗಿ ಸ್ಥಳೀಯ ಸಂಸದ ಜಮ್ಯಾಂಗ್ ತ್ಸೆರಿಂಗ್ ನಾಮ್‌ಗ್ಯಾಲ್ ದೂರು ನೀಡಿದ್ದಾರೆ. ಅಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಂಸದರು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಜಾಹೀರಾತು ಪ್ರಚಾರದ ಚಿತ್ರೀಕರಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಂಪನಿಯ ಚಿತ್ರೀಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಸರ ವ್ಯವಸ್ಥೆಯನ್ನು ವಾಣಿಜ್ಯ ಲಾಭಕ್ಕಾಗಿ ನಾಶಪಡಿಸಬಾರದು ಎಂದು ಶೀರ್ಷಿಕೆ ಬರೆದು ಹಂಚಿಕೊಂಡಿದ್ದಾರೆ.

ಶೂಟಿಂಗ್ ಅನ್ನು ನಿಲ್ಲಿಸಲು ಮತ್ತು ಅಗತ್ಯವಿರುವಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಭವಿಷ್ಯದ ಪೀಳಿಗೆಗೆ ಲಡಾಖ್‌ನ ಅನನ್ಯ ಸೌಂದರ್ಯವನ್ನು ಸಂರಕ್ಷಿಸೋಣ ಎಂದು ನಮ್ ಗ್ಯಾಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಆದರೆ, ಸಂಸ್ಥೆಯು ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ, ಆಸಕ್ತ ಗ್ರಾಹಕರು ಎಲ್ಲಾ ಹೊಸ ಮಾರುತಿ ಸುಜುಕಿ ಜಿಮ್ನಿಯನ್ನು ಯಾವುದೇ ಅಧಿಕೃತ ನೆಕ್ಸಾ ಡೀಲರ್‌ಶಿಪ್‌ನಿಂದ ಬುಕ್ ಮಾಡಬಹುದು. ವಾಹನವು ಝೀಟಾ ಮತ್ತು ಆಲ್ಫಾ ಎಂಬ ಎರಡು ರೂಪಾಂತರಗಳಲ್ಲಿ ಬರಲಿದೆ. ಸದ್ಯಕ್ಕೆ ವಾಹನದ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಮೇ ತಿಂಗಳ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

— Jamyang Tsering Namgyal (Modi Ka Parivar) (@jtnladakh) April 10, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...